ವಾಣಿಜ್ಯ

ಜನವರಿಯಲ್ಲಿ ರಿಲಯನ್ಸ್ ಜಿಯೊಗೆ 93 ಲಕ್ಷಕ್ಕೂ ಅಧಿಕ ಹೊಸ ಗ್ರಾಹಕರು!

Sumana Upadhyaya
ನವದೆಹಲಿ: ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿದರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಉಳಿದ ಟೆಲಿಕಾಂ ಸೇವಾ ಪೂರೈಕೆದಾರರಿಗಿಂತ(ಟಿಎಸ್ ಪಿ) ದೇಶದಲ್ಲಿ ಮುಂದಿದೆ.
ಕಳೆದ ಜನವರಿ ತಿಂಗಳೊಂದರಲ್ಲಿಯೇ ರಿಲಯನ್ಸ್ ಜಿಯೊ 93 ಲಕ್ಷ ಮೊಬೈಲ್ ಗ್ರಾಹಕರನ್ನು ಸಂಪಾದಿಸಿದೆ. ಇದರ ಸಮೀಪ ಸ್ಪರ್ಧಿ ಭಾರ್ತಿ ಏರ್ ಟೆಲ್ ಕೇವಲ ಒಂದು ಲಕ್ಷ ಹೊಸ ಗ್ರಾಹಕರನ್ನು ಜನವರಿಯಲ್ಲಿ ಹೊಂದಿತ್ತು ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಅಂಕಿಅಂಶ ತಿಳಿಸಿದೆ.
ಜನವರಿಯಲ್ಲಿ ಇತರ ಟೆಲಿಕಾಂ ಸೇವೆಗಳಾದ ಬಿಎಸ್ಎನ್ ಎಲ್ 9.82 ಲಕ್ಷ ಗ್ರಾಹಕರನ್ನು ಹೊಂದಿದೆ. ಅದಕ್ಕೆ ಪ್ರತಿಯಾಗಿ ದೇಶದ ಅತಿದೊಡ್ಡ ಟೆಲಿಕಾಂ ಪೂರೈಕೆಯಾದ ವೊಡಫೋನ್ ಐಡಿಯಾ 35.8 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ.
ದೇಶದಲ್ಲಿ ಸದ್ಯ ಒಟ್ಟು 29 ಕೋಟಿ ಜಿಯೊ ಗ್ರಾಹಕರಿದ್ದು ಜನವರಿ ಕೊನೆ ವೇಳೆಗೆ ಶೇಕಡಾ 25ರಷ್ಟು ಮಾರುಕಟ್ಟೆ ಷೇರನ್ನು ಹೊಂದಿತ್ತು. ವೊಡಫೋನ್ ಐಡಿಯಾ ಮತ್ತು ಏರ್ ಟೆಲ್ ಒಂದು ಮತ್ತು ಎರಡನೇ ಸ್ಥಾನದಲ್ಲಿದ್ದು ಇವುಗಳ ಮಾರುಕಟ್ಟೆ ಷೇರು ಶೇಕಡಾ 35.12 ಮತ್ತು 28.80ಯಷ್ಟಿದೆ.
ಬ್ರಾಂಡ್ ಬಾಂಡ್ ಸೇವೆಯಲ್ಲಿಯೂ ಸಹ ರಿಲಯನ್ಸ್ ಜಿಯೊ ಮುಂಚೂಣಿಯಲ್ಲಿದೆ. ಕಳೆದ ಡಿಸೆಂಬರ್ ನಿಂದ ಜನವರಿ ವೇಳೆಗೆ ದೇಶದಲ್ಲಿ ಬ್ರಾಡ್ ಬಾಂಡ್ ಗಳ ಸೇವೆ 51.8 ಕೋಟಿಯಿಂದ 54 ಕೋಟಿಗೆ ಏರಿಕೆಯಾಗಿದೆ. ಮೊಬೈಲ್ ಸಾಧನ ಆಧಾರಿತ ಬ್ರಾಡ್ ಬಾಂಡ್ ಗಳ ಸಂಪರ್ಕ 52.1 ಕೋಟಿ ಗ್ರಾಹಕರೊಂದಿಗೆ ಶೇಕಡಾ 96ರಷ್ಟು ಹೆಚ್ಚಿಗೆಯಾಗಿದ್ದು ವೈರ್ ಲೆಸ್ ಸಂಪರ್ಕ 1.82 ಕೋಟಿ ಗ್ರಾಹಕರನ್ನು ತಲುಪಿದೆ.
SCROLL FOR NEXT