ವಾಣಿಜ್ಯ

ಜೆಟ್ ಏರ್ವೇಸ್ ಮೇಲೆತ್ತಲು ಎರಡು ಅನಿರೀಕ್ಷಿತ ಪ್ರಸ್ತಾವನೆ, ಮತ್ತೊಂದು ನಿರೀಕ್ಷೆಯಲ್ಲಿ

Srinivas Rao BV
ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ನ್ನು ಖರೀದಿಸುವುದಕ್ಕೆ ಅನಿರೀಕ್ಷಿತವಾಗಿ ಎರಡು ಪ್ರಸ್ತಾವನೆಗಳು ಬಂದಿದ್ದು, ಮತ್ತೊಂದು ನಿರೀಕ್ಷಿಯಲ್ಲಿದೆ ಎಂದು ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ. 
ಜೆಟ್ ಏರ್ವೇಸ್ ಮೇಲೆತ್ತಲು ಎಸ್ ಬಿಐ ಸೇರಿದಂತೆ ಇತರ ಲೆಂಡರ್ ಗಳು  ಜೆಟ್ ಏರ್ವೇಸ್ ನ ಶೇ.50.01 ರಷ್ಟು ಷೇರುಗಳನ್ನು ಕೇವಲ 1 ರೂಪಾಯಿಗೆ ಖರೀದಿಸಿ, 114 ಮಿಲಿಯನ್ ಹೊಸ ಷೇರುಗಳನ್ನು ಪರಿಚಯೊಸಲು ಮುಂದಾಗಿವೆ.
ಈಗ ಎಸ್ ಬಿಐ ನ ಅಧ್ಯಕ್ಷರು ನೀಡಿರುವ ಮಾಹಿತಿಯ ಪ್ರಕಾರ ಎರಡು ಅನಿರೀಕ್ಷಿತ ಪ್ರಸ್ತಾವನೆ ಈಗಾಗಲೇ ಬಂದಿದ್ದು ಮತ್ತೊಂದು ನಿರೀಕ್ಷೆಯಲ್ಲಿ ಎಂದು ತಿಳಿದುಬಂದಿದೆ.
SCROLL FOR NEXT