ವಾಣಿಜ್ಯ

ಏರ್ ಇಂಡಿಯಾದಲ್ಲಿ ಆಸಕ್ತಿಯಿಲ್ಲ, ಇಂಡಿಗೊದಲ್ಲಿ ಷೇರನ್ನು ಖರೀದಿಸಬಹುದು: ಕತಾರ್ ಏರ್ವೇಸ್ 

Sumana Upadhyaya

ನವದೆಹಲಿ: ಏರ್ ಇಂಡಿಯಾದ ಷೇರನ್ನು ಖರೀದಿಸಲು ಕತಾರ್ ಏರ್ವೇಸ್ ಆಸಕ್ತಿ ಹೊಂದಿಲ್ಲ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.


ಭಾರತೀಯ ರಾಷ್ಟ್ರೀಯ ಹೂಡಿಕೆಗಾಗಿ ಹೂಡಿಕೆದಾರರನ್ನು ಆಕರ್ಷಿಸಲು ಕೇಂದ್ರ ಸರ್ಕಾರ ಸಿಂಗಾಪುರ ಮತ್ತು ಲಂಡನ್‌ನಲ್ಲಿ ರೋಡ್ ಶೋಗಳನ್ನು ಆಯೋಜಿಸಿದ್ದರ ಮಧ್ಯೆ ಕತಾರ್ ಏರ್ವೇಸ್ ಈ ಹೇಳಿಕೆ ನೀಡಿದೆ. 


ಇಂಡಿಗೊ ಕಂಪೆನಿಯ ಷೇರನ್ನು ಖರೀದಿಸಲು ಇಷ್ಟವಿದ್ದರೂ ಪ್ರವರ್ತಕರ ನಡುವಿನ ವಿವಾದವನ್ನು ಬಗೆಹರಿಸಬೇಕಾಗಿರುವುದರಿಂದ ಇದು ಸೂಕ್ತ ಸಮಯವಲ್ಲ ಎಂದು ಕತಾರ್ ಏರ್ವೇಸ್ ನ ಸಿಇಒ ಅಕ್ಬರ್ ಅಲ್ ಬಕೆರ್ ತಿಳಿಸಿದ್ದಾರೆ.


ಇಂಡಿಗೊ ಇಂದು ಕತಾರ್ ಏರ್ವೇಸ್ ಜೊತೆಗೆ ಏಕಮುಖ ಕೋಡ್ ಷೇರು ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಿಂದ ಕತಾರ್ ಏರ್ವೇಸ್, ಇಂಡಿಗೊ ವಿಮಾನದಲ್ಲಿ ಕೆಲವು ನಿಶ್ಚಿತ ಸ್ಥಳಗಳಿಗೆ ಸೀಟುಗಳನ್ನು ಕಾಯ್ದಿರಿಸಬಹುದು.


ಸ್ಥಳೀಯ ವಿಮಾನ ಪ್ರಯಾಣ ಮಾರುಕಟ್ಟೆಯಲ್ಲಿ ಶೇಕಡಾ 48ರಷ್ಟು ಷೇರುಗಳನ್ನು ಹೊಂದಿರುವ ಇಂಡಿಗೊ ಭಾರತದ ಅತಿದೊಡ್ಡ ವಾಯುಯಾನ ಕಂಪೆನಿಯಾಗಿದೆ.

SCROLL FOR NEXT