ವಾಣಿಜ್ಯ

ಪ್ರಸಕ್ತ ವರ್ಷ ವಿಶ್ವದ ಆರ್ಥಿಕತೆ ಶೇ.90 ರಷ್ಟು ಕುಸಿತ: ಐಎಂಎಫ್ 

Sumana Upadhyaya

ವಾಷಿಂಗ್ಟನ್: ಜಾಗತಿಕ ಆರ್ಥಿಕತೆ ಕುಸಿತ ಕಂಡುಬರುತ್ತಿದ್ದು ಅದರ ಪರಿಣಾಮ ಪ್ರಸಕ್ತ ವರ್ಷ ಹೆಚ್ಚಾಗಿದೆ, ಅದರಲ್ಲೂ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಾದ ಭಾರತದಲ್ಲಿ ಇದರ ಪರಿಣಾಮ ತೀವ್ರವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ನೂತನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ. 


ಪ್ರಸಕ್ತ ಹಣಕಾಸು ವರ್ಷದಲ್ಲಿ ವಿಶ್ವದ ಆರ್ಥಿಕತೆ ಶೇಕಡಾ 90ರಷ್ಟು ಕಡಿಮೆಯಾಗಬಹುದು ಎಂದು ಸಹ ಅವರು ಅಂದಾಜು ಮಾಡಿದ್ದಾರೆ. 


ಹಣಕಾಸು ನಿಧಿಯ ನೂತನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡ ಅವರು ಮೊದಲ ಬಾರಿಗೆ ನಿನ್ನೆ ವಾಷಿಂಗ್ಟನ್ ನಲ್ಲಿ ಸಾರ್ವಜನಿಕ ಭಾಷಣ ನೀಡಿದ್ದು ಅದರಲ್ಲಿ , 2019ರಲ್ಲಿ ವಿಶ್ವದ ಆರ್ಥಿಕತೆ ಶೇಕಡಾ 90ರಷ್ಟು ನಿಧಾನಗತಿಯಲ್ಲಿ ಸಾಗಲಿದೆ. ಜಾಗತಿಕ ಆರ್ಥಿಕತೆ ಕೂಡ ಇದರ ಒಟ್ಟೊಟ್ಟಿಗೆ ನಿಧಾನಗತಿಯಲ್ಲಿ ಸಾಗುತ್ತಿದೆ, ಎರಡು ವರ್ಷಗಳ ಹಿಂದೆ ವಿಶ್ವದ ಆರ್ಥಿಕತೆ ಶೇಕಡಾ 75ರಷ್ಟು ಪ್ರಗತಿಯತ್ತ ಸಾಗುತ್ತಿತ್ತು ಎಂದರು. 


ಕಳೆದ ದಶಕದಿಂದೀಚಿಗೆ ಆರ್ಥಿಕತೆ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಇದೇ ಮೊದಲು ಎಂದು ಹೇಳಿದರು. ಸ್ವತಃ ಆರ್ಥಿಕ ತಜ್ಞೆಯಾಗಿರುವ ಬುಲ್ಜರಿಯನ್ ಕ್ರಿಸ್ಟಿನ್ ಲಗಾರ್ಡೆ ಅವರಿಂದ ಅಧಿಕಾರ ವಹಿಸಿಕೊಂಡಿದ್ದು ಇವರು ಯುರೋಪಿಯನ್ ಸೆಂಟ್ರಲ್ ಬ್ಯಾಂಕಿನ ಅಧ್ಯಕ್ಷೆ ಹುದ್ದೆ ವಹಿಸಿಕೊಳ್ಳಲಿದ್ದಾರೆ.


ಇನ್ನೊಂದು ವಾರದಲ್ಲಿ ಐಎಂಎಫ್ ಮತ್ತು ವಿಶ್ವ ಬ್ಯಾಂಕಿನ ಜಂಟಿ ವಾರ್ಷಿಕ ಸಭೆ ನಡೆಯಲಿದ್ದು ವಿಶ್ವದ ಉನ್ನತ ಆರ್ಥಿಕ ತಜ್ಞರು, ಸಚಿವರುಗಳು ಮತ್ತು ಬ್ಯಾಂಕರುಗಳ ಸಮ್ಮುಖದಲ್ಲಿ ವಿಶ್ವದ ಮುಂದಿನ ಆರ್ಥಿಕತೆ ಬಗ್ಗೆ ಎರಡೂ ಸಂಸ್ಥೆಗಳು ಯೋಜನೆ ಪ್ರಕಟಿಸಲಿದೆ.

SCROLL FOR NEXT