ವಾಣಿಜ್ಯ

ಎಸ್ ಬಿಐಯಿಂದ ಸಾಲದ ಮೇಲಿನ ಬಡ್ಡಿದರ ಇಳಿಕೆ; ನಾಳೆ ಜಾರಿ 

Sumana Upadhyaya

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದೆ.ಎಂಸಿಎಲ್ ಆರ್ ದರವನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಿರುವ ಎಸ್ ಬಿಐ ನಾಳೆಯಿಂದ ಜಾರಿಗೆ ಬರಲಿದೆ. 


ಎಂಸಿಎಲ್ ಆರ್ ದರ ಶೇಕಡಾ 8.05ಕ್ಕೆ ಇಳಿಕೆಯಾಗಲಿದೆ. ಇದರಿಂದಾಗಿ ಈಗಾಗಲೇ ಬ್ಯಾಂಕಿನಿಂದ ಗೃಹಸಾಲ ಮತ್ತು ಇತರ ಚಿಲ್ಲರೆ ಸಾಲ ಪಡೆದುಕೊಂಡಿರುವವರಿಗೆ ಅಗ್ಗವಾಗಲಿದೆ.


ಸ್ಟೇಟ್ ಬ್ಯಾಂಕಿನ ಒಂದು ವರ್ಷದ ಎಂಸಿಎಲ್ಆರ್ ಶೇಕಡಾ 8.15ರಿಂದ ಶೇಕಡಾ 8.05ಕ್ಕೆ ಇಳಿಕೆಯಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎಂಸಿಎಲ್ಆರ್ ಇಳಿಕೆಯಾಗುತ್ತಿರುವುದು ಇದು ಆರನೇ ಸಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಿದ ನಂತರ ಸ್ಟೇಟ್ ಬ್ಯಾಂಕ್ ನಿಂದ ಈ ಪ್ರಕಟಣೆ ಹೊರಬಿದ್ದಿದೆ.


ಹಬ್ಬಗಳ ಸಮಯ ಮತ್ತು ಎಲ್ಲಾ ವರ್ಗದ ಗ್ರಾಹಕರಿಗೆ ಅನುಕೂಲವಾಗಲು ಎಸ್ ಬಿಐ ಎಂಸಿಎಲ್ಆರ್ ದರವನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಿದೆ ಎಂದು ಬ್ಯಾಂಕ್ ನ ಹೇಳಿಕೆ ಇಂದು ತಿಳಿಸಿದೆ.


ಎಂಸಿಎಲ್ಆರ್ ಎಂದರೇನು?: ಬ್ಯಾಂಕ್ ಗ್ರಾಹಕರ ಮೇಲೆ ಸಾಲದ ಮೇರೆ ವಿಧಿಸಬಹುದಾದ ಅತ್ಯಂತ ಕಡಿಮೆ ಬಡ್ಡಿದರವಾಗಿದ್ದು, ಆರ್ ಬಿಐಯ ಅವಕಾಶವಿಲ್ಲದೆ ಇದಕ್ಕಿಂತ ಕಡಿಮೆ ಬಡ್ಡಿದರವನ್ನು ಬ್ಯಾಂಕ್ ವಿಧಿಸಲು ಸಾಧ್ಯವಿಲ್ಲವಾಗಿರುತ್ತದೆ. ಬ್ಯಾಂಕ್ ನ ಸ್ವಂತ ವೆಚ್ಚದ ನಿಧಿಯನ್ನು ಆಧರಿಸಿ ಎಂಸಿಎಲ್ಆರ್ ಇರುತ್ತದೆ. ಗ್ರಾಹಕರ ಈಗಿರುವ ಗೃಹಸಾಲ ಎಸ್ ಬಿಐಯ ಎಂಸಿಎಲ್ಆರ್ ದರದ ಜೊತೆ ಜೋಡಣೆಯಾಗಿದ್ದರೆ ಇಂದಿನ ಇಳಿಕೆಯಿಂದಾಗಿ ಗ್ರಾಹಕರ ಇಎಂಐ ದರ ಕೂಡಲೇ ಇಳಿಕೆಯಾಗುವುದಿಲ್ಲ. 

SCROLL FOR NEXT