ಸಂಗ್ರಹ ಚಿತ್ರ 
ವಾಣಿಜ್ಯ

ಒಂದೇ ಒಂದು ದೂರಿಗೆ ಷೇರುಪೇಟೆಯಲ್ಲಿ ಶೇ.16ರಷ್ಟು ಕುಸಿತ ಕಂಡ ಇನ್ಫೋಸಿಸ್!

ಇನ್ಫೋಸಿಸ್ ನ ಸಿಇಒ ವಿರುದ್ಧ ಕೇಳಿ ಬಂದ ಒಂದೇ ಒಂದು ದೂರಿನ ಪರಿಣಾಮ ಸಂಸ್ಥೆಯ ಷೇರುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ಇನ್ಫೋಸಿಸ್ ಸಂಸ್ಥೆಯ ಷೇರುಗಳು ಬರೊಬ್ಬರಿ ಶೇ.16ರಷ್ಟು ಕುಸಿತ ಕಂಡಿದೆ.

ಬೆಂಗಳೂರು: ಇನ್ಫೋಸಿಸ್ ನ ಸಿಇಒ ವಿರುದ್ಧ ಕೇಳಿ ಬಂದ ಒಂದೇ ಒಂದು ದೂರಿನ ಪರಿಣಾಮ ಸಂಸ್ಥೆಯ ಷೇರುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ಇನ್ಫೋಸಿಸ್ ಸಂಸ್ಥೆಯ ಷೇರುಗಳು ಬರೊಬ್ಬರಿ ಶೇ.16ರಷ್ಟು ಕುಸಿತ ಕಂಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ ಮತ್ತೆ ಇದೀಗ ನಕಾರಾತ್ಮಕ ವಿಚಾರಗಳಿಂದ ಮತ್ತೆ ಸುದ್ದಿಗೆ ಗ್ರಾಸವಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ವ್ಯವಹಾರ ನಡೆಸುವ ಬೆಂಗಳೂರು ಮೂಲದ ಇನ್ಫೋಸಿಸ್ ಕಂಪೆನಿ ಷೇರುಗಳು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿದ್ದು, ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ.16ರಷ್ಟು ಕುಸಿತ ಕಂಡುಬಂದಿದೆ. ಕಳೆದ 6 ವರ್ಷಗಳಲ್ಲೇ ಈ ರೀತಿ ಕುಸಿತವನ್ನು ಕಂಡಿರಲಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ 109.25 ರುಪಾಯಿ ಕುಸಿತ ಕಂಡು (ಶೇ 14.23ರಷ್ಟು) 658.50 ರುಪಾಯಿಯಲ್ಲಿ ವಹಿವಾಟು ನಡೆಸಿತು. ಈ ಸಮಯಕ್ಕೆ 11.32ಕ್ಕೆ ಬಿಎಸ್ಇಯಲ್ಲಿ 110.30 ರು ಕಳೆದುಕೊಂಡು 14.43% ಕುಸಿತ ಕಂಡು 656.95 ರು ನಂತೆ ವಹಿವಾಟು ನಡೆಸಿದೆ. ಇದೇ ವೇಳೆ ಎನ್ಎಸ್ಇಯಲ್ಲಿ 110.50 ರು ಕಳೆದುಕೊಂಡು 14.33% ಕುಸಿದು 657.85 ರು ನಂತೆ ವ್ಯವಹಾರ ನಡೆಸುತ್ತಿದೆ.

ಷೇರು ಮೌಲ್ಯ ಕುಸಿತದ್ದೆ ಕಾರಣವಾಯ್ತು ಒಂದೇ ಒಂದು ದೂರು
ಇನ್ನು ಸಂಸ್ಥೆಯ ಆರ್ಥಿಕ ಚಟುವಟಿಕೆಗಳಿದೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಯೊಬ್ಬರು ಅಮೆರಿಕದಲ್ಲಿ ದೂರು ಸಲ್ಲಿಕೆ ಮಾಡಿದ್ದು, ಅದೂ ಕೂಡ ಸಂಸ್ಥೆಯ ಸಿಇಒ ಸಲೀಲ್ ಪರೇಖ್ ವಿರುದ್ಧವೇ ದೂರು ಸಲ್ಲಿಕೆ ಮಾಡಿದ್ದಾರೆ. ಸಲೀಲ್ ಪರೇಖ್ ಅನೈತಿಕವಾದ ಪದ್ಧತಿ ಅನುಸರಿಸುತ್ತಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಲಾಭದ ಸಂಖ್ಯೆ ಮತ್ತು ಪ್ರಮಾಣ ಹೆಚ್ಚಳವಾಗಿದೆ ಎಂದು ತೋರಿಸಲು ವಾಮಮಾರ್ಗ ಬಳಿಸಲಾಗಿದೆ ಎಂದು ಅಮೆರಿಕದ ಷೇರುಪೇಟೆ ಸೆಕ್ಯುರಿಟೀಸ್ ಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.  

ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಇನ್ಫೋಸಿಸ್ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಕುರಿತಂತೆ ಮಾತನಾಡಿರುವ ನಂದನ್ ನಿಲೇಕಣಿ ಅವರು, ಸಂಸ್ಥೆಯ ಆಡಿಟ್ ಸಮಿತಿ ಎದುರು ಅಕ್ಟೋಬರ್ 10, 2019ರಂದು ಹಾಗೂ ನಾನ್ ಎಕ್ಸಿಕ್ಯೂಟಿವ್ ಸದಸ್ಯರ ಸಮಿತಿ ಎದುರು ಅಕ್ಟೋಬರ್ 11, 2019ರಂದು ಎರಡು ಅನಾಮಧೇಯ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ, ಆಂತರಿಕ ತನಿಖೆ ಆರಂಭವಾಗಿದೆ ಎಂದಿದ್ದಾರೆ. 

ಸಿಇಒ ಸಲಿಲ್ ಪರೇಖ್ ಅವರ ಅಂತಾರಾಷ್ಟ್ರೀಯ ಪ್ರವಾಸ, ಯುಎಸ್, ಮುಂಬೈಗೆ ಪ್ರಯಾಣದ ಬಗ್ಗೆ ದೂರುಗಳಿವೆ. ಶಾರ್ದೂಲ್ ಅಮರಚಂದ್ ಮಂಗಳ್ ದಾಸ್ ಆಡಿಟಿ ಸಮಿತಿಯಿಂದ ಸ್ವತಂತ್ರವಾಗಿ ತನಿಖೆ ನಡೆಸಲಾಗುತ್ತಿದ್ದು, ತನಿಖೆ ವರದಿ ಬರುವ ತನಕ ಕಾಯಬೇಕಿದೆ ಎಂದು ನಂದನ್ ಹೇಳಿದರು. 

ಇನ್ಫೋಸಿಸ್ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ನಿರ್ಗಮನದ ನಂತರ ವಿಶಾಲ್ ಸಿಕ್ಕಾ ಅವರು ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದ ಸಂದರ್ಭದಲ್ಲೂ ಇದೇ ರೀತಿ ಅನಾಮಧೇಯ ದೂರು ಪತ್ರಗಳು ಕೇಳಿ ಬಂದಿದ್ದವು. ಇದರಿಂದ ಏಷ್ಯಾದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ಗೆ ಭಾರಿ ನಷ್ಟ ಉಂಟಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT