ವಾಣಿಜ್ಯ

ಮುಂದಿನ ವರ್ಷದ ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ಬಹಿರಂಗಪಡಿಸಿದ ಐಎಂಎಫ್ 

Srinivas Rao BV

ಭಾರತದ ಆರ್ಥಿಕತೆ 2020 ವೇಳೆಗೆ ಶೇ.7 ರಷ್ಟು ಬೆಳವಣಿಗೆ ಕಾಣಲಿದೆ ಎಂದು ಐಎಂಎಫ್ ಅಂದಾಜು ಪ್ರಕಟಿಸಿದೆ. 

ಆರ್ಥಿಕ ಉತ್ತೇಜನ ಹಾಗೂ ಕಾರ್ಪೊರೇಟ್ ಆದಾಯ ತೆರಿಗೆ ಕಡಿತ ಸೇರಿದಂತೆ ಹಲವು ಕ್ರಮಗಳ ಪರಿಣಾಮವಾಗಿ ಭಾರತದ ಆರ್ಥಿಕತೆ 2020 ವೇಳೆಗೆ ಶೇ.7 ರಷ್ಟು ಬೆಳವಣಿಗೆ ಸಾಧ್ಯವಾಗಲಿದೆ ಎಂದು ಐಎಂಎಫ್ ನ ಏಷ್ಯಾ ಪೆಸಿಫಿಕ್ ವಿಭಾಗದ ನಿರ್ದೇಶಕ ಜೊನಾಥನ್ ಒಸ್ಟ್ರಿ ಹೇಳಿದ್ದಾರೆ. 

ಈ ವರ್ಷ ಶೇ.6.1 ರಷ್ಟು ಬೆಳವಣಿಗೆ ಇರುವ ಭಾರತದ ಆರ್ಥಿಕತೆ ಮುಂದಿನ ವರ್ಷದಲ್ಲಿ ಶೇ.7 ರಷ್ಟು ಬೆಳವಣಿಗೆಗೆ ತಲುಪಲಿದೆ. ಸದ್ಯದ ಭಾರತದ ಆರ್ಥಿಕ ಹಿಂಜರಿತದ ಬಗ್ಗೆ ನಮಗೂ ಅಚ್ಚರಿ ಉಂಟಾಗಿದೆ. ಆರ್ಥಿಕ ಹಿಂಜರಿತಕ್ಕೆ ಯಾವುದೇ ಕಾರಣಗಳೂ ಇರಲಿಲ್ಲ ಎಂದು  ಜೊನಾಥನ್ ಒಸ್ಟ್ರಿ ಹೇಳಿದ್ದಾರೆ.

SCROLL FOR NEXT