ವಾಣಿಜ್ಯ

ಒಂದೇ ಸೂರಿನಡಿ ಡಿಜಿಟಲ್ ಘಟಕಗಳನ್ನು ತರಲು ರಿಲಯನ್ಸ್ ಇಂಡಸ್ಟ್ರೀಸ್ ಯೋಜನೆ 

Sumana Upadhyaya

ನವದೆಹಲಿ: ಕೊರ್ಪೊರೇಟ್ ವಲಯದ ಮರುರಚನೆಗೆ ಮುಂದಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ತನ್ನೆಲ್ಲಾ ಡಿಜಿಟಲ್ ಉದ್ಯಮಗಳನ್ನು ಒಂದೇ ಸೂರಿನಡಿ ತರಲು ಮುಂದಾಗಿದ್ದಾರೆ. ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನು ರಚಿಸಿದ್ದು ತನ್ನೆಲ್ಲಾ ಪ್ರವರ್ಧಮಾನಕ್ಕೆ ಬರುತ್ತಿರುವ ಡಿಜಿಟಲ್ ಉದ್ಯಮಗಳ ಕಾರ್ಯನಿರ್ವಹಣೆ ಮಾಡಲಿದೆ. 


ಇದಕ್ಕಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸುಮಾರು 1 ಲಕ್ಷದ 08 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ. ಕಂಪೆನಿಯ ನಿರ್ಧಾರದಿಂದಾಗಿ ರಿಲಯನ್ಸ್ ಜಿಯೊ ಸಾಲಮುಕ್ತ ಕಂಪೆನಿಯಾಗಲಿದೆ. 


ಕಂಪೆನಿ ಅಧ್ಯಕ್ಷ ಮುಕೇಶ್ ಅಂಬಾನಿ, ಹೊಸ ಘಟಕಗಳು ಹೂಡಿಕೆದಾರರನ್ನು ಆಕರ್ಷಿಸಲಿದೆ ಎಂಬ ವಿಶ್ವಾಸವಿದೆ. ನಮ್ಮ ಡಿಜಿಟಲ್ ಪರಿಸರವ್ಯವಸ್ಥೆಯಲ್ಲಿ ಉತ್ತಮ ಸಾಮರ್ಥ್ಯದ ಸಹಭಾಗಿಗಳು ನಮಗೆ ಸಿಕ್ಕಿದ್ದಾರೆ. ಅದು ಮುಂದುವರಿಯುತ್ತದೆ ಎಂಬ ವಿಶ್ವಾಸವಿದೆ ಎಂದರು.

SCROLL FOR NEXT