ವಾಣಿಜ್ಯ

ಹಣದುಬ್ಬರ ಇಳಿಕೆ,ಆರ್ಥಿಕ ಪ್ರಗತಿ ಕುಂಠಿತದಿಂದ ಆರ್ ಬಿಐ ದರ ಕಡಿತ ಹೆಚ್ಚಳಕ್ಕೆ ಅವಕಾಶ- ಶಕ್ತಿಕಾಂತ್ ದಾಸ್ 

Nagaraja AB

ಮುಂಬೈ: ಆರ್ಥಿಕ ಬೆಳವಣಿಗೆ ಬೆಂಬಲಿಸಲು ಸರ್ಕಾರ ಸೀಮಿತ ಹಣಕಾಸು ವ್ಯಾಪ್ತಿಯನ್ನು ಹೊಂದಿದೆ. ಆದರೆ, ಹಣದುಬ್ಬರ ಇಳಿಕೆ, ಆರ್ಥಿಕ ಪ್ರಗತಿ ಕುಂಠಿತದಿಂದ ಆರ್ ಬಿಐ ದರ ಕಡಿತವನ್ನು ಮತ್ತಷ್ಟು ಸರಳಗೊಳಿಸಲು ಹಾಗೂ ಆರ್ಥಿಕ ಪ್ರಗತಿಗೆ ನೆರವಾಗಲಿದೆ ಎಂದು ಆರ್ ಬಿಐ ಗೌರ್ವನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಕ್ರಮಗಳು ಹಾಗೂ ನಡೆಗಳು ಹಣಕಾಸಿನ ವಿಚಾರದಲ್ಲಿ ವಿವೇಕಯುತವಾಗಿದೆ. ಕೇಂದ್ರ ಸರ್ಕಾರದಿಂದ ಇಂತಹ ಹೆಚ್ಚಿನ ರೀತಿಯ ಬ್ಯಾಲೆನ್ಸ್ ಶೀಟ್ ಕ್ರಮಗಳು ನಡೆಯಬಹುದು ಎಂದಿದ್ದಾರೆ.

ಜೆಡಿಪಿ ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ತಳಲ್ಪಟ್ಟಿದ್ದು,  ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿ ಆರ್ ಬಿಐ ಈಗಾಗಲೇ ನಾಲ್ಕು ಬಾರಿ ದರಗಳನ್ನು ಕಡಿತ ಮಾಡಿದೆ ಎಂದು  ಅವರು ತಿಳಿಸಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ದರಗಳ ಸ್ಥಿರತೆ ಕಂಡುಬರುತ್ತಿದೆ. ಹಣದುಬ್ಬರ ಶೇ. 4 ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿದೆ. ಮುಂದಿನ 12 ತಿಂಗಳಲ್ಲಿ ದಿಗಂತದ ಸ್ಥಿತಿ ತಲುಪಲಿದೆ. ಆರ್ಥಿಕ ಪ್ರಗತಿ ಇಳಿಕೆಯಾದಾಗ ಹೆಚ್ಚಿನ ದರ ಕಡಿತವಾಗಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 

ಆದಾಗ್ಯೂ, ಆರ್ ಬಿಐ ಪರಿಷ್ಕೃತ ಬೆಳವಣಿಗೆ ಅಂದಾಜು ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದರು. ಮುಂದಿನ ಪರಿಷ್ಕೃತ ಹಣಕಾಸು ನೀತಿ ಘೋಷಣೆ ವೇಳೆಯಲ್ಲಿ ಇದನ್ನು ತಿಳಿಸಲಾಗುವುದು ಎಂದು ಅವರು ತಿಳಿಸಿದರು.

SCROLL FOR NEXT