ವಾಣಿಜ್ಯ

ಕೋವಿಡ್-19 ಲಾಕ್ ಡೌನ್: ಎಲೆಕ್ಟ್ರಾನಿಕ್, ಫೋನ್ ತಯಾರಕರಿಂದ ಗ್ರಾಹಕರಿಗೆ ವಾರೆಂಟಿ ಅವಧಿ ವಿಸ್ತರಣೆ

Srinivas Rao BV

ನವದೆಹಲಿ: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್, ಫೋನ್ ತಯಾರಕರಿಂದ ಗ್ರಾಹಕರಿಗೆ ವಾರೆಂಟಿ ಅವಧಿ ವಿಸ್ತರಣೆ ಮಾಡಲಾಗಿದೆ. 

ಸ್ಯಾಮ್ ಸಂಗ್, ಒನ್ ಪ್ಲಸ್, ಓಪ್ಪೋ ಹಾಗೂ ಇತರ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕಾ ಸಂಸ್ಥೆಗಳು ಮಾರ್ಚ್ 20 ರಿಂದ ಏಪ್ರಿಲ್ 30, 2020 ಅವಧಿಯಲ್ಲಿ ಮುಕ್ತಾಯಗೊಳ್ಳುತ್ತಿದ್ದ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ವಾರೆಂಟಿ ಅವಧಿಯನ್ನು ಮೇ.31, 2020 ವರೆಗೆ ವಿಸ್ತರಣೆ ಮಾಡುವುದಾಗಿ ಘೋಷಿಸಿವೆ. 
 
ಒನ್ ಪ್ಲಸ್ ಮೊಬೈಲ್ ಸಂಸ್ಥೆ ಮಾ.1 ರಿಂದ ಕ್ಕೆ ಮುಕ್ತಾಯಗೊಳ್ಳುತ್ತಿದ್ದ ವಾರೆಂಟಿ ಅವಧಿಯನ್ನು ಮೇ.31 ರವರೆಗೆ ವಿಸ್ತರಣೆ ಮಾಡುವುದಾಗಿ ತಿಳಿಸಿದೆ. ಓಪ್ಪೋ ಸಹ ಇದೇ ರೀತಿಯ ಘೋಷಣೆಯನ್ನು ಮಾಡಿದೆ.  

ಚೀನಾದೇ ಸಂಸ್ಥೆಯಾಗಿರುವ ಶಿಯೋಮಿ ಪರಿಸ್ಥಿತಿ ಉತ್ತಮಗೊಂಡ ಬಳಿಕ ಗ್ರಾಹಕರಿಗೆ ಅಗತ್ಯವಿರುವ ಸೇವೆಗಳನ್ನು ಒದಗಿಸುತ್ತೇವೆ ಎಂದು ಹೇಳಿದೆ. 

ರಿಯಲ್ ಮೀ ತನ್ನ ಉತ್ಪನ್ನಗಳ ವಾರೆಂಟಿ ಅವಧಿಯನ್ನು ಮೇ.31 ವರೆಗೆ ವಿಸ್ತರಿಸಿದ್ದು, ಮಾ.15- ಏಪ್ರಿಲ್-30 ರಿಪ್ಲೇಸ್ಮೆಂಟ್ ಅವಧಿಯನ್ನು  30 ದಿನ ವಿಸ್ತರಣೆ ಮಾಡಿದೆ. ಟಿವಿ, ಫೀಚರ್ ಫೋನ್ ಗಳಂತಹ ವಸ್ತುಗಳ ಮೇಲಿನ ವಾರೆಂಟಿಯನ್ನು 60 ದಿನಗಳ ವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ. 
 

SCROLL FOR NEXT