ವಾಣಿಜ್ಯ

ನೌಕರರ ಭವಿಷ್ಯ ನಿಧಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬೇಕೆ, ಆನ್ ಲೈನ್ ನಲ್ಲಿ ಹೀಗೆ ಮಾಡಿ

ನೌಕರರ ಭವಿಷ್ಯ ನಿಧಿಯ ನಿವೃತ್ತಿ ಉಳಿತಾಯ ಖಾತೆಯಿಂದ ಒಂದು ಭಾಗವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು ಎಂದು ಕಾರ್ಮಿಕ ಇಲಾಖೆ ಸೂಚನೆ ಹೊರಡಿಸಿದೆ.

ನೌಕರರ ಭವಿಷ್ಯ ನಿಧಿಯ ನಿವೃತ್ತಿ ಉಳಿತಾಯ ಖಾತೆಯಿಂದ ಒಂದು ಭಾಗವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು ಎಂದು ಕಾರ್ಮಿಕ ಇಲಾಖೆ ಸೂಚನೆ ಹೊರಡಿಸಿದೆ. ಅದರ ಪ್ರಕಾರ ನೌಕರರ ಭವಿಷ್ಯ ನಿಧಿ ಹೊಂದಿರುವ ನೌಕರರು ತಮ್ಮ ಮೂರು ತಿಂಗಳ ಮೂಲ ಆದಾಯ ಮತ್ತು ತುಟ್ಟಿ ಭತ್ಯೆಯನ್ನು ಸೇರಿಸಿದಾಗ ಆಗುವ ಮೊತ್ತದಷ್ಟು ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು.

ಪ್ರಧಾನ ಮಂತ್ರಿಗಳು ಕಳೆದ ತಿಂಗಳು 24ರಂದು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ ನಂತರ ಸಾಂಕ್ರಾಮಿಕ ರೋಗ ಕಾಯ್ದೆಯ ಅಡಿ ಪಿಂಚಣಿ ನಿಧಿಯನ್ನು ವಿತ್ ಡ್ರಾ ಮಾಡಿಕೊಡಬೇಕೆಂದು ಹಲವು ಮನವಿಗಳು ಬಂದವು. ನೌಕರರು ಆಧಾರ್ ಸಂಖ್ಯೆಯನ್ನು ಸಾರ್ವತ್ರಿಕ ಖಾತೆ ಸಂಖ್ಯೆ(ಯುಎಎನ್) ಜೊತೆ ಜೋಡಣೆ ಮಾಡಿಕೊಂಡಿದ್ದರೆ ಆನ್ ಲೈನ್ ನಲ್ಲಿ ವಿತ್ ಡ್ರಾ ಮಾಡಿಕೊಳ್ಳಬಹುದು.

ಆನ್ ಲೈನ್ ನಲ್ಲಿ ವಿತ್ ಡ್ರಾ ಮಾಡಿಕೊಳ್ಳುವ ಮೊದಲು ಈ ಕೆಲಸ ಮಾಡಿರಬೇಕು:

ನಿಮ್ಮ ಯುಎಎನ್ ಸಕ್ರಿಯವಾಗಿರಬೇಕು.

ಆಧಾರ್ ಸಂಖ್ಯೆ ಯುಎಎನ್ ಜೊತೆ ಜೋಡಣೆಯಾಗಿರಬೇಕು.

ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಐಎಫ್ಎಸ್ ಸಿ ಜೊತೆ ಯುಎಎನ್ ಗೆ ಜೋಡಣೆಯಾಗಿರಬೇಕು.

ಯುಎಎನ್ ಸಂಖ್ಯೆಯನ್ನು ಜೋಡಣೆ ಮಾಡದಿದ್ದರೆ ಹೀಗೆ ಮಾಡಿ:

www.epfindia.gov.inವೆಬ್ ಸೈಟ್ ತೆರೆಯಿರಿ.

ಅದರಲ್ಲಿ our service ಕ್ಲಿಕ್ ಮಾಡಿ ನಂತರ ಫಾರ್ ಎಂಪ್ಲಾಯಿಸ್ ಎಂದು ಕ್ಲಿಕ್ ಮಾಡಿ.

ನಂತರ ಅದರಲ್ಲಿ ‘member UAN/online servicesಗೆ ಕ್ಲಿಕ್ ಮಾಡಿ. ಅದರಲ್ಲಿ ಯುಎಎನ್ ಸದಸ್ಯ ಪೋರ್ಟಲ್ ಗೆ ಹೋಗುತ್ತದೆ.

ಪುಟ ತೆರೆದಾಗ ನಿಮ್ಮ ಯುಎಎನ್ ಸಂಖ್ಯೆ ಆಕ್ಟಿವೇಟ್ ಮಾಡಿ ಎಂದು ಕೇಳುತ್ತದೆ. ಬಲಬದಿಯಲ್ಲಿ ಪ್ರಮುಖ ಸಂಪರ್ಕದಲ್ಲಿ ಅದು ಸಿಗುತ್ತದೆ.

ಅಲ್ಲಿ ಸಂಬಂಧಪಟ್ಟ ಅಗತ್ಯ ವಿವರಗಳನ್ನು ನೀಡಿ i agree ಆಯ್ಕೆಯನ್ನು ಒತ್ತಿ.

ನಂತರ ನಿಮಗೆ ಮೊಬೈಲ್ ನಲ್ಲಿ ಒಟಿಪಿ ಸಂಖ್ಯೆ ಸಿಗುತ್ತದೆ.

ಒಟಿಪಿ ಸಂಖ್ಯೆ ದಾಖಲು ಮಾಡಿ.

ಕೊನೆಗೆ validate OTP and activate UAN ಎಂದು ಕ್ಲಿಕ್ ಮಾಡಿ

ಆಗ ನೀವು ಯುಎಎನ್ ಯನ್ನು ಸಕ್ರಿಯಗೊಳಿಸಿದ್ದೀರಿ ಎಂದರ್ಥ.

ಪ್ರಾವಿಡೆಂಟ್ ಫಂಡ್ ನ್ನು ನಿಮ್ಮ ಖಾತೆಯಿಂದ ವಿತ್ ಡ್ರಾ ಮಾಡುವುದು ಹೇಗೆ:

  1. ಮೊದಲಿಗೆ ಇಪಿಎಫ್ಒ ವೆಬ್ ಸೈಟ್ ತೆರೆಯಿರಿ.
  2. ಯುಎಎನ್ ಲಾಗಿನ್ ಮಾಡಿ ಪಾಸ್ ವರ್ಡ್ ಕೊಟ್ಟು ಕ್ಯಾಪ್ಚ ನೀಡಿ.
  3. ಅಲ್ಲಿ ಆನ್ ಲೈನ್ ಸರ್ವಿಸ್ ಗೆ ಕ್ಲಿಕ್ ಮಾಡಿ ಕ್ಲೈಮ್ ಫಾರ್ಮ್ ಆಯ್ಕೆಮಾಡಿ.
  4. ಆಗ ಸದಸ್ಯ ವಿವರ ಕೇಳುತ್ತದೆ, ಆಗ ನಿಮ್ಮ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕೆಯನ್ನು ನೀಡಿ, ವೆರಿಫೈಗೆ ಕ್ಲಿಕ್ ಮಾಡಿ.
  5. ಆಗ ಹೊಸಪುಟಕ್ಕೆ ಮರುನಿರ್ದೇಶನ ಮಾಡುತ್ತದೆ.
  6. ಆ ಪುಟದಲ್ಲಿ ನೀವು ಪಿಎಫ್ ಅಡ್ವಾನ್ಸ್ ಫಾರ್ಮ್ 31ಗೆ ಕ್ಲಿಕ್ ಮಾಡಿ ಅಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಎಂದು ನಿಮ್ಮ ಹಣವನ್ನು ವಿತ್ ಡ್ರಾ ಮಾಡುವ ಕಾರಣಕ್ಕೆ ಕ್ಲಿಕ್ ಮಾಡಬೇಕು.
  7. ಅಲ್ಲಿ ಸಂಬಂಧಪಟ್ಟ ವಿವರ, ವಿತ್ ಡ್ರಾ ಮಾಡುವ ಹಣದ ವಿವರ, ವಿಳಾಸ ನೀಡಬೇಕು.
  8. ಅಲ್ಲಿ ಶೇಕಡಾ 75ರಷ್ಟು ಹಣ ಅಥವಾ 3 ತಿಂಗಳ ವೇತನ ಅಥವಾ ನೀವು ಮನವಿ ಮಾಡಿಕೊಂಡ ಹಣದಲ್ಲಿ ಯಾವುದು ಕಡಿಮೆಯಾಗುತ್ತದೆ ಅದನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡಿಕೊಳ್ಳುತ್ತದೆ.
  9. ಅಲ್ಲಿ ನಿಮ್ಮ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಹಣ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹೋಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT