ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಮೇ 31ರವರೆಗೆ ಎಲ್ಲಾ ವಿಮಾನಗಳಲ್ಲಿ ಉಚಿತ ರೀಶೆಡ್ಯೂಲಿಂಗ್, ನೇರ ಬುಕಿಂಗ್ ರಿಯಾಯಿತಿ ಘೋಷಿಸಿದ ಏರ್ ಏಷ್ಯಾ ಇಂಡಿಯಾ

ಮೇ 31 ರವರೆಗೆ ಅನ್ವಯಿಸುವಂತೆ ಪ್ರಯಾಣಕ್ಕಾಗಿ ಪ್ರಸ್ತುತ ಮತ್ತು ಭವಿಷ್ಯದ ಬುಕಿಂಗ್‌ಗಳ ಎಲ್ಲಾ ರೀ ಶೆಡ್ಯೂಲಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಏರ್‌ಏಷ್ಯಾ ಇಂಡಿಯಾ ಘೋಷಿಸಿದೆ.

ಸಂಗ್ರಹ ಚಿತ್ರ
Raghavendra Adiga
Updated On : 6 Apr 2020, 4:11 pm

ನವದೆಹಲಿ: ಮೇ 31 ರವರೆಗೆ ಅನ್ವಯಿಸುವಂತೆ  ಪ್ರಯಾಣಕ್ಕಾಗಿ ಪ್ರಸ್ತುತ ಮತ್ತು ಭವಿಷ್ಯದ ಬುಕಿಂಗ್‌ಗಳ ಎಲ್ಲಾ ರೀ ಶೆಡ್ಯೂಲಿಂಗ್  ಶುಲ್ಕವನ್ನು ಮನ್ನಾ ಮಾಡುವುದಾಗಿ ಏರ್‌ಏಷ್ಯಾ ಇಂಡಿಯಾ ಘೋಷಿಸಿದೆ. 

ಕೊರೋನಾವೈರಸ್  ಅನಿಶ್ಚಿತತೆಯ ದೃಷ್ಟಿಯಿಂದ  ಏರ್‌ಏಷ್ಯಾ ಇಂಡಿಯಾ ಈ ಪ್ರಸ್ತಾಪವನ್ನು ಘೋಷಿಸಿದೆ.

ಇದಲ್ಲದೆ, ಏರ್‌ಏಷ್ಯಾ ಇಂಡಿಯಾ www.airasia.com ಮತ್ತು ಏರ್‌ಏಷ್ಯಾ ಇಂಡಿಯಾ ಮೊಬೈಲ್ ಆ್ಯಪ್‌ನಲ್ಲಿ 14 ದಿನಗಳ ಮುಂಚಿತವಾಗಿ ಮಾಡಿದ ಬುಕಿಂಗ್‌ಗಳಿಗೆ ಶೇಕಡಾ 10 ರಷ್ಟು ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಪ್ರೋಮೋ ಕೋಡ್ FLYNOW10  ಬಳಸಿ ಯಾರು ಟಿಕೆಟ್ ಬುಕ್ ಮಾಡುವರೋ ಅವರು ಈ ರಿಯಾಯಿತಿ ಪಡೆಯಲಿದ್ದಾರೆ ಎಂದು ಹೇಳಿಕೆ ನೀಡಿದೆ.

Advertisement

Advertisement

ಜನರು ತಮ್ಮ ಬುಕಿಂಗ್ ಅನ್ನು ನಿರ್ವಹಿಸಬಹುದು ಮತ್ತು ರೀಶೆಡ್ಯೂಲಿಂಗ್ ಮಾಡಿಸುವ ಮೂಲಕ  ವಿಮಾನಯಾನ ವೆಬ್‌ಸೈಟ್‌ನಲ್ಲಿ "ಬಿಗ್ ಮೆಂಬರ್" ಆಗಿ ಸೈನ್ ಅಪ್ ಮಾಡುವ ಮೂಲಕ ತಮ್ಮ ಮೂಲ ಬುಕಿಂಗ್ ಮಾಡುವಾಗ ಬಳಸುವ ಇ-ಮೇಲ್ ಐಡಿಯೊಂದಿಗೆ, ತಮ್ಮ ಅಸ್ತಿತ್ವದಲ್ಲಿರುವ ಪಿಎನ್‌ಆರ್ ಅನ್ನು ತಮ್ಮ ಬಿಗ್ ಮೆಂಬರ್ ಐಡಿಗೆ ಲಿಂಕ್ ಮಾಡಿ ಮತ್ತು ಅವರ ಬುಕಿಂಗ್ ಅನ್ನುಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement