ವಾಣಿಜ್ಯ

ಕೊರೋನಾ ಎಫೆಕ್ಟ್:  ಕೇವಲ ಎರಡು ತಿಂಗಳಲ್ಲಿ ಶೇಕಡಾ 28 ರಷ್ಟು ಸಂಪತ್ತು ಕಳೆದುಕೊಂಡ ಮುಖೇಶ್ ಅಂಬಾನಿ

Raghavendra Adiga

ಮುಂಬೈ: ಷೇರು ಮಾರುಕಟ್ಟೆಗಳಲ್ಲಿ ಭಾರಿ  ಏರಿಳಿತವಾಗಿರುವ ಕಾರಣ  ಮಾರ್ಚ್ 31 ರ ವೇಳೆಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ನಿವ್ವಳ ಆದಾಯದಲ್ಲಿ ಶೇಕಡಾ 28 ಅಥವಾ 300 ಮಿಲಿಯನ್ ರು. ನಷ್ಟು ಇಳಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಅಂಬಾನಿಯವರ ಆದಾಯ ್48 ಬಿಲಿಯನ್ ಡಾಲರ್ ಗೆ ಕುಸಿತವಾಗಿದೆ. ಜಾಗತಿಕ ಮಹಾಮಾರಿಯಾಗಿರುವ ಕೊರೋನಾ ಹಾವಳಿಯ ಕಾರಣ ಆರ್ಥಿಕ ಹಿಂಜರಿತ ಜಗತ್ತಿನಾದ್ಯಂತ ವ್ಯಾಪಿಸಿರುವುದು ರಿಲಯನ್ಸ್ ಗ್ರೂಪ್ ಅಧ್ಯಲ್ಷರ ಈ ಸಂಕಷ್ಟಕ್ಕೆ ಕಾರಣವಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಅವರ ಸಂಪತ್ತು 19 ಬಿಲಿಯನ್ ಅಮೆರಿಕನ್ ಡಾಲರ್ ಗೆ ಇಳಿಕೆಯಾಗಿದ್ದು ಅವರ ಜಾಗತಿಕ ಶ್ರೇಯಾಂಕದಲ್ಲಿ ಎಂಟು ಸ್ಥಾನ ಕುಸಿತವಾಗಿ 17 ನೇ ಸ್ಥಾನಕ್ಕೆ ಇಳಿದಿದೆ ಎಂದು ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಹೇಳಿದೆ. 

ಇದಲ್ಲದೆ ಭಾರತದ ಪ್ರಮುಖ ಉದ್ಯಮಿಗಳಾದ ಗೌತಮ್ ಅದಾನಿ ( 6 ಬಿಲಿಯನ್ ಡಾಲರ್ ಅಥವಾ 37 ಪ್ರತಿಶತ)ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ ನಾಡರ್ (5 ಬಿಲಿಯನ್ ಡಾಲರ್ ಅಥವಾ 26 ಶೇಕಡಾ) ಮತ್ತು ಬ್ಯಾಂಕರ್ ಉದಯ್ ಕೊಟಕ್ (4 ಬಿಲಿಯನ್ ಡಾಲರ್ ಅಥವಾ 28) ಶೇಕಡಾ) ಅವರುಗಳ ಆದಾಯ, ಸಂಪತ್ತಿನ ಪ್ರಮಾಣದಲ್ಲಿ ಸಹ ಇಳಿಕೆಯಾಗಿದೆ.

ಮೂವರೂ ಅಗ್ರ 100 ಪಟ್ಟಿಯಿಂದ ಹೊರಗುಳಿದಿದ್ದು ಸಧ್ಯ ಅಂಬಾನಿ ಮಾತ್ರವೇ ಪಟ್ಟಿಯಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ. ಕಂಪೆನಿಗಳ ಮೇಲೆ ಕೋವಿಡ್-9 ಸಾಂಕ್ರಾಮಿಕ ರೋಗದ ಆರ್ಥಿಕ ವೆಚ್ಚಗಳು ಮತ್ತು ಪ್ರಭಾವ ವ್ಯಾಪಕಆಗಿದ್ದು  ಕಳೆದ ಎರಡು ತಿಂಗಳಲ್ಲಿ ಭಾರತೀಯ ಮಾರುಕಟ್ಟೆ ಶೇಕಡಾ 25 ರಷ್ಟು ಇಳಿಕೆ ದಾಖಲಿಸಿದೆ.

SCROLL FOR NEXT