ವಾಣಿಜ್ಯ

ಕೋವಿಡ್ ಹೋರಾಟದ ಬಗ್ಗೆ ತಮ್ಮ ಹೆಸರು ಉಲ್ಲೇಖಿಸಿ ನಕಲಿ ಸುದ್ದಿ: ಸ್ಪಷ್ಟನೆ ನೀಡಿದ ರತನ್ ಟಾಟಾ

Raghavendra Adiga

ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶವು ಹೆಣಗಾಡುತ್ತಿರುವಾಗ, ಹಲವಾರು ಕಿಡಿಗೇಡಿಗಳು ಸಾಮಾಜಿಕ ತಾಣಗಳ ಮೂಲಕ ವದಂತಿಗಳು, ನಕಲಿ ಸುದ್ದಿಗಳು, ಸುಳ್ಳು 'ಸಂಗತಿಗಳನ್ನು  ಹರಡಲು ಒಂದು ಅವಕಾಶವಾಗಿ ಬಳಸಿಕೊಂಡಿದ್ದಾರೆ. ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯಲು ಸರ್ಕಾರದ ಪ್ರಯತ್ನದ ಹೊರತಾಗಿಯೂ, ಅದರ ಹಿಂದಿರುವವರನ್ನು ಪತ್ತೆ ಮಾಡುವುದು ಕಷ್ಟಕರವೆಂದು ಸಾಬೀತಾಗಿದೆ.

ಭಾರತದ ಖ್ಯಾತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಹೇಳಿರುವರೆಂದು ಹೇಳಲಾದ ಒಂದು ಹೇಳಿಕೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಬಳಿಕ ಟಾಟಾ ಅವರೇ ಇದಕ್ಕೆ ಸ್ಪಷ್ಟನೆ ಕೊಡಬೇಕಾಯಿತು.

82 ವರ್ಷದ ರತನ್ ಟಾಟಾ ಟ್ವಿಟ್ಟರ್ ನಲ್ಲಿ ಈ ಸ್ಪಷ್ಟನೆ ಕೊಟ್ಟಿದ್ದಾರೆ. "ಈ ಪೋಸ್ಟ್ ಅನ್ನು ನಾನು ಉಲ್ಲೇಖಿಸಿಲ್ಲ. ಅಥವಾ ಬರೆದಿಲ್ಲ, ವಾಟ್ಸಾಪ್ ಮತ್ತು ಸಾಮಾಜಿಕ ತಾಣಗಳಲ್ಲಿ ನಾನೇನನ್ನೂ ಹೇಳುವುದಿಲ್ಲ. ಹಾಗೊಮ್ಮೆ ಏನನ್ನಾದರೂ ಹೇಳಬೇಕಾಗಿದೆ ಎಂದರೆ , ನಾನು ಅದನ್ನು ನನ್ನ ಅಧಿಕೃತ ಚಾನೆಲ್‌ಗಳಲ್ಲಿ ಹೇಳುತ್ತೇನೆ. ನೀವು ಸುರಕ್ಷಿತರಾಗಿದ್ದೀರಿ ಮತ್ತು ಕಾಳಜಿ ವಹಿಸುತ್ತೀರಿ ಎಂದು ಭಾವಿಸುತ್ತೇವೆ."

ಟಾಟಾ ಅವರ ಈ ಸ್ಪಷ್ಟನೆಗೆ ಕಾರಣವಾದ ಸುಳ್ಳು ವದಂತಿಯಲ್ಲಿ ಭಾರತೀಯ ಆರ್ಥಿಕತೆಯ ಅವನತಿಯನ್ನು ಊಹಿಸಿದ ‘ತಜ್ಞರನ್ನು’ ಟೀಕಿಸಲಾಗಿತ್ತು. “ಈ ತಜ್ಞರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಮಾನವನಲ್ಲಿನ ಪ್ರೇರಣಾಶಕ್ತಿ ಹಾಗೂ ದೃಢ ನಿಶ್ಚಯದ ಪ್ರಯತ್ನಗಳ ಮೌಲ್ಯದ ಬಗ್ಗೆ ಅವರಿಗೆ ಏನೂ ತಿಳಿದಿಲ್ಲ ಎಂದು ನನಗೆ ಖಚಿತವಾಗಿ ತಿಳಿದಿದೆ. ”

ಏತನ್ಮಧ್ಯೆ, ಕೋವಿಡ್ -19 ವಿರುದ್ಧದ ಹೋರಾಟಕ್ಕಾಗಿ ಟಾಟಾ 500 ಕೋಟಿ ರೂ., ಟಾಟಾ ಸನ್ಸ್ ಪ್ರತ್ಯೇಕವಾಗಿ 1,000 ಕೋಟಿ ರೂ. ನೆರವು ನೀಡಿದೆ.  ವೈದ್ಯಕೀಯ ಸಿಬ್ಬಂದಿ, ವೆಂಟಿಲೇಟರ್‌ಗಳು, ಪರೀಕ್ಷಾ ಕಿಟ್‌ಗಳು ಮತ್ತು ಮಾಡ್ಯುಲರ್ ಚಿಕಿತ್ಸಾ ಸೌಲಭ್ಯಗಳಿಗಾಗಿ ವೈಯಕ್ತಿಕ ರಕ್ಷಣಾ ಸಲಕರಣೆಗಳ (ಪಿಪಿಇ) ಅಭಿವೃದ್ಧಿಗೆ 500 ಕೋಟಿ ರೂ. ಗಳನ್ನು ನೀಡಲು ಬದ್ದವಾಗಿದ್ದೇನೆ ಎಂದು ಮಾರ್ಚ್ 28 ರಂದು ಟಾಟಾ ಟ್ವೀಟ್ ಮಾಡಿದ್ದಾರೆ.

SCROLL FOR NEXT