ವಾಣಿಜ್ಯ

ಚೀನಾಗೆ ಮತ್ತೊಂದು ಶಾಕ್:  ವಿದ್ಯುತ್ ಕ್ಷೇತ್ರದಲ್ಲಿ ಸ್ಥಳೀಯೇತರ ಗುತ್ತಿಗೆದಾರರು ಹೊರಕ್ಕೆ

Srinivas Rao BV

ನವದೆಹಲಿ: ಥರ್ಮಲ್ ಪವರ್ ಕ್ಷೇತ್ರಕ್ಕೆ ಅಗತ್ಯವಿರುವ ಕನಿಷ್ಟ 110 ಸರಕುಗಳು ಮತ್ತು ಸೇವೆಗಳನ್ನು ಪೂರೈಸುವ ಸ್ಥಳೀಯೇತರ ಗುತ್ತಿಗೆದಾರರಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. 

ವಿದ್ಯುತ್ ಕ್ಷೇತ್ರದಲ್ಲಿ ಆಮದನ್ನು ಪ್ರಮುಖವಾಗಿ ಚೀನಾದ ಸರಕುಗಳನ್ನು ಕಡಿಮೆ ಮಾಡುವುದಕ್ಕಾಗಿ ಇಂಧನ ಸಚಿವಾಲಯ ತನ್ನ ಹೊಸ ಸಾರ್ವಜನಿಕ ಖರೀದಿ ಆದೇಶ (public procurement order) ದಲ್ಲಿ ಈ ಮಾರ್ಪಾಡು ಮಾಡಿದೆ. 

ಹೊಸ ಆದೇಶದ ಪ್ರಕಾರ ಟ್ರಾನ್ಸ್ಫಾರ್ಮರ್, ಸ್ವಿಚ್ ಗೇರ್, ಕೇಬಲ್ ಹಾಗೂ ಇನ್ಸುಲೇಟರ್ ಮುಂತಾದ ಉಪಕರಣಗಳನ್ನು, ಶೇ.50 ರಷ್ಟು ದೇಶೀಯ ಕಾಂಪೊನೆಂಟ್ ಗಳನ್ನು ಬಳಸುವ ಕ್ಲಾಸ್-1 ಶ್ರೇಣಿಯ ಕಂಪನಿಗಳಿಂದ ಖರೀದಿಸಬೇಕಾಗುತ್ತದೆ. 

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಥವ ಪವರ್ ಫೈನಾನ್ಸ್ ಕಾರ್ಪೊರೇಷನ್ ಹಾಗೂ ಆರ್ ಇಸಿ ಲಿಮಿಟೆಡ್ ಗಳಿಂದ ಫಂಡ್ ಆಗಿರುವ ಯೋಜನೆಗಳಿಗೆ ಸಂಬಂಧಿಸಿದ ಉಪಕರಣಗಳ ಪೂರೈಕೆ ಬಿಡ್ ನಲ್ಲಿ ಭಾಗಿಯಾಗಲು ಸ್ಥಳೀಯ ಪೂರೈಕೆದಾರರನ್ನು ಹೊರತುಪಡಿಸಿ ಬೇರೆಲ್ಲಾ ಸಂಸ್ಥೆಗಳನ್ನೂ ನಿರ್ಬಂಧಿಸಲಾಗಿದೆ. 

ಇಂಧನ ಸಚಿವಾಲಯ ಪಬ್ಲಿಕ್ ಪ್ರೊಕ್ಯೂರ್ಮೆಂಟ್ ಆರ್ಡರ್ ನಲ್ಲಿ 69 ವಸ್ತುಗಳನ್ನು ಪಟ್ಟಿ ಮಾಡಿದ್ದು, ಈ ಪೈಕಿ ಬೌದ್ಧಿಕ ಹಕ್ಕು ಸ್ವಾಮ್ಯ ಹೊಂದಿರುವ ವಿದೇಶಿ ಉತ್ಪಾದಕರ ಪರವಾನಗಿಯ ಅಡಿಯಲ್ಲಿ ತಯಾರಿಸುವ ವಸ್ತುಗಳನ್ನೂ ಈ ಪಟ್ಟಿಗೆ ಸೇರಿಸಲಾಗಿದೆ. ಈ ವಸ್ತುಗಳನ್ನು ಶೇ.20-50 ರಷ್ಟು ದೇಶೀಯ ಕಾಂಪೊನೆಂಟ್ ಗಳನ್ನು ಬಳಕೆ ಮಾಡುವ ಕ್ಲಾಸ್-II ಪೂರೈಕೆದಾರ ಕಂಪನಿಗಳಿಂದ ಖರೀದಿಸಬಹುದಾಗಿದೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. 

ದೇಶದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದದೇ ಇರುವ ವಿದೇಶಿ ಸಂಸ್ಥೆಗಳು ಸರ್ಕಾರದ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಥವಾ ಅನುದಾನಿತ ಯೋಜನೆಗಳಿಗೆ ಕರೆಯುವ, 200 ಕೋಟಿಗೂ ಅಧಿಕ ಮೊತ್ತದ ಆರ್ಡರ್ ಗಳಿರುವ ಜಾಗತಿಕ ಮಟ್ಟದ ಟೆಂಡರ್ ನಲ್ಲಿ ಮಾತ್ರ ಭಾಗಿಯಾಗಬಹುದಾಗಿದೆ. 

SCROLL FOR NEXT