ವಾಣಿಜ್ಯ

ಫಾರ್ಚೂನ್ ಗ್ಲೋಬಲ್ 500 ಪಟ್ಟಿ: ಜಗತ್ತಿನ ಅಗ್ರ 100  ಕಂಪನಿಗಳಲ್ಲಿ ಸ್ಥಾನ ಪಡೆದ ರಿಲಯನ್ಸ್ ಇಂಡಸ್ಟ್ರೀಸ್

Raghavendra Adiga

ನವದೆಹಲಿ: ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ವಿಶ್ವದ ನಾಲ್ಕನೇ ಶ್ರೀಮಂತರಾಗಿರುವ ಭಾರತದ  ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ  10 ಸ್ಥಾನ ಮೇಲೇರಿ ವಿಶ್ವದ ಅಗ್ರ 100 ಕಂಪನಿಗಳಲ್ಲಿ  ಒಂದೆನಿಸಿದೆ,

ಫಾರ್ಚೂನ್ ಮಂಗಳವಾರ ಬಿಡುಗಡೆ ಮಾಡಿರುವ 2020 ರ ರ್ಯಾಂಕಿಂಗ್‌ ಪಟ್ಟಿಯಲ್ಲಿ ತೈಲದಿಂದ ಟೆಲಿಕಾಂ ವರೆಗೆ ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರ ಹೊಂದಿರುವ ರಿಲಯನ್ಸ್ 96 ನೇ ಸ್ಥಾನದಲ್ಲಿದೆ. ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಅತಿ ಹೆಚ್ಚಿನ ಶ್ರೇಣಿಯಲ್ಲಿ ಸ್ಥಾನ ಪಡೆದ ಭಾರತದ ಕಂಪನಿಗಳಲ್ಲಿ ರಿಲಯನ್ಸ್ ಏಕೈಕ ಕಂಪನಿಯಾಗಿದೆ.

ಈ ಹಿಂದೆ 2012ರಲ್ಲಿ ರಿಲಯನ್ಸ್ 99 ನೇ ಸ್ಥಾನ ಪಡೆದಿತ್ತು.  ಆದರೆ ನಂತರದ ವರ್ಷಗಳಲ್ಲಿಸಂಸ್ಥೆ  ಅಗ್ರ 100 ಸ್ಥಾನಗಳಿಂಡ ಕೆಳಗಿಳಿದಿತ್ತು  ಹಾಗೆಯೇ 2016 ರಲ್ಲಿ 215 ನೇ ಸ್ಥಾನಕ್ಕೆ ಕುಸಿದಿತ್ತು. ಅಂದಿನಿಂದ ಮತ್ತೆ ನಿಯಮಿತವಾಗಿ ರ್ಯಾಂಕಿಂಗ್ ಪಟ್ಟಿಯಲ್ಲಿ ಏರಿಕೆ ದಾಖಲಿಸಿರುವ ಸಂಸ್ಥೆ ಇದೀಗ 96 ನೇ ಸ್ಥಾನದಲ್ಲಿದೆ,

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ (ಐಒಸಿ) 2020 ರ ರ್ಯಾಂಕಿಂಗ್‌ನಲ್ಲಿ 34 ಸ್ಥಾನಗಳಷ್ಟು ಇಳಿದು 151 ನೇ ಸ್ಥಾನಕ್ಕೆ ತಲುಪಿದ್ದರೆ, ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪ್ (ಒಎನ್‌ಜಿಸಿ) ಸಹ ಕಳೆದ ಬಾರಿಗಿಂತ 30 ಸ್ಥಾನ ಕುಸಿದು 190 ನೇಸ್ಥಾನ ಪಡೆದಿದೆ,

ದೇಶದ ಅಗ್ರ ಸಾಲದಾತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 15 ಸ್ಥಾನ ಮೇಲೇರಿ 221 ನೇ ಸ್ಥಾನಕ್ಕೆ ತಲುಪಿದೆ.ಈ ಪಟ್ಟಿಯಲ್ಲಿರುವ ಇತರ ಭಾರತೀಯ ಸಂಸ್ಥೆಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಬಿಪಿಸಿಎಲ್) - 309, ಟಾಟಾ ಮೋಟಾರ್ಸ್- 337 ಹಾಗೂ ರಾಜೇಶ್ ಎಕ್ಸ್ಪೋರ್ಟ್ಸ್ - 462. ನೇ ಸ್ಥಾನದಲ್ಲಿದೆ, ಮಾರ್ಚ್ 31, 2020 ರಂದು ಅಥವಾ ಅದಕ್ಕೂ ಮೊದಲು ಕೊನೆಗೊಂಡ ಆಯಾ ಹಣಕಾಸಿನ ವರ್ಷಗಳಲ್ಲಿ ಕಂಪೆನಿಗಳು ಒಟ್ಟು ಆದಾಯವನ್ನು ಗಮನಿಸಿ ಅವುಗಳ ಸ್ಥಾನ ನಿಗದಿಯಾಗಿದೆ,. ರಿಲಯನ್ಸ್ 86.2 ಬಿಲಿಯನ್ ಡಾಲರ್ ಆದಾಯವನ್ನು ಹೊಂದಿದ್ದರೆ, ಐಒಸಿ 69.2 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಹೊಂದಿದೆ,  ಒಎನ್‌ಜಿಸಿ 57 ಬಿಲಿಯನ್ ಡಾಲರ್ ಮತ್ತು ಎಸ್‌ಬಿಐಗೆ 51 ಬಿಲಿಯನ್ ಡಾಲರ್ ಆದಾಯವಿದೆ.

2020 ರ ಪಟ್ಟಿಯಲ್ಲಿ ವಾಲ್ಮಾರ್ಟ್ 524 ಬಿಲಿಯನ್ ಡಾಲರ್ ಆದಾಯದೊಂದಿಗೆ ಅಗ್ರಸ್ಥಾನದಲ್ಲಿದೆ, ಚೀನಾದ ಮೂರು ಕಂಪನಿಗಳಾದ ಸಿನೊಪೆಕ್ ಗ್ರೂಪ್ (407 ಬಿಲಿಯನ್ ಡಾಲರ್) , ಸ್ಟೇಟ್ ಗ್ರಿಡ್ (384 ಬಿಲಿಯನ್ ಡಾಲರ್) , ಮತ್ತು ಚೀನಾ ನ್ಯಾಷನಲ್ ಪೆಟ್ರೋಲಿಯಂ (379 ಬಿಲಿಯನ್ ಡಾಲರ್) ನಂತರದ ಸ್ಥಾನದಲ್ಲಿದೆ, ರಾಯಲ್ ಡಚ್ ಶೆಲ್ 5 ನೇ ಸ್ಥಾನದಲ್ಲಿದ್ದರೆ, ಸೌದಿ ತೈಲೋದ್ಯಮ ದೈತ್ಯ ಸಂಸ್ಥೆ ಅರಾಮ್ಕೊ 6 ನೇ ಸ್ಥಾನದಲ್ಲಿದೆ.

SCROLL FOR NEXT