ವಾಣಿಜ್ಯ

ಹಣದುಬ್ಬರ ಪ್ರಮಾಣ 9 ತಿಂಗಳ ಗರಿಷ್ಠ ಮಟ್ಟಕ್ಕೆ, ಆಹಾರ ಸಾಮಗ್ರಿ ಬೆಲೆಗಳಲ್ಲಿ ಯಥಾಸ್ಥಿತಿ

Raghavendra Adiga

ನವದೆಹಲಿ: ಸಗಟು ಬೆಲೆ ಆಧಾರಿತ ಹಣದುಬ್ಬರವು ನವೆಂಬರ್‌ನಲ್ಲಿ 9 ತಿಂಗಳ ಗರಿಷ್ಠ ಮಟ್ಟ 1.55 ಕ್ಕೆ ಏರಿದೆ. ತಯಾರಿಕಾ ಉತ್ಪನ್ನಗಳು ಬಾರಿಯಾಗಿದ್ದು ಇದಕ್ಕೆ ಕಾರಣವೆನ್ನಲಾಗಿದೆ.  ಆದರೆ ಆಹಾರದ ಬೆಲೆಗಳು ಸ್ಥಿರವಾಗಿದ್ದವು. ಸಗಟು ಬೆಲೆ ಆಧಾರಿತ ಹಣದುಬ್ಬರ ಕಳೆದ ಅಕ್ಟೋಬರ್‌ನಲ್ಲಿ ಶೇ 1.48 ಇದ್ದರೆ ಇದಕ್ಕೆ ಹಿಂದಿನ ವರ್ಷದ ನವೆಂಬರ್ ನಲ್ಲಿ ಶೇ 0.58 ರಷ್ಟಿತ್ತು.

ಫೆಬ್ರವರಿಯ ನಂತರದಲ್ಲಿ ಇದು ಅತಿ ಹೆಚ್ಚಿನ ಪ್ರಮಾಣದ ಏರಿಕೆಯಾಗಿದ್ದು ಫೆಬ್ರವರಿಯಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ (ಡಬ್ಲ್ಯುಪಿಐ) ಹಣದುಬ್ಬರ ಶೇಕಡಾ 2.26 ರಷ್ಟಿತ್ತು. ಆಹಾರ ಸಾಮಗ್ರಿಗಳುನವೆಂಬರ್‌ನಲ್ಲಿ ಹಣದುಬ್ಬರವನ್ನು ಏರುಗತಿಯಿಂದ ತಡೆಯಲು ಯತ್ನಿಸಿದ್ದರೆ ತಯಾರಿಕಾ ಉತ್ಪನ್ನಗಳು ಇದಕ್ಕೆ ವಿರುದ್ಧವಾಗಿದ್ದವು. ನವೆಂಬರ್‌ನಲ್ಲಿ ಆಹಾರ ಹಣದುಬ್ಬರವು ಶೇಕಡಾ 3.94 ರಷ್ಟಿದ್ದು, ಹಿಂದಿನ ತಿಂಗಳಲ್ಲಿ ಇದು 6.37 ರಷ್ಟಿತ್ತು.

ತರಕಾರಿಗಳು ಮತ್ತು ಆಲೂಗಡ್ಡೆಯ ಬೆಲೆ ಏರಿಕೆಯ ಪ್ರಮಾಣವು ತಿಂಗಳಲ್ಲಿ ಶೇಕಡಾ 12.24 ಮತ್ತು 115.12 ರಷ್ಟಿದೆ. ಆಹಾರೇತರ ಸಾಮಗ್ರಿಗಳ ಹಣದುಬ್ಬರವು ನವೆಂಬರ್‌ನಲ್ಲಿ ಶೇಕಡಾ 8.43 ರಷ್ಟಿತ್ತು. ಇಂಧನ ಮತ್ತು ವಿದ್ಯುತ್ ವಲಯ ನವೆಂಬರ್‌ನಲ್ಲಿ ಶೇ 9.87 ಕ್ಕೆ ತಲುಪಿತ್ತು.

ಈ ತಿಂಗಳ ಆರಂಭದಲ್ಲಿ ಆರ್‌ಬಿಐ ತನ್ನ ಹಣಕಾಸು ನೀತಿಯಲ್ಲಿ ಹಣದುಬ್ಬರವು ಉತ್ತುಂಗಕ್ಕೇರಿದೆ ಎಂದು ಹೇಳಿದ್ದು, ಚಳಿಗಾಲದ ತಿಂಗಳುಗಳಲ್ಲಿ ಅಸ್ಥಿರ ಪರಿಹಾರವನ್ನು ಹೊರತುಪಡಿಸಿ. ಇದು ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಚಿಲ್ಲರೆ ಹಣದುಬ್ಬರವನ್ನು ಶೇ 6.8 ರಷ್ಟಾಗಲಿದೆ ಎಂದಿತ್ತು.

SCROLL FOR NEXT