ವಾಣಿಜ್ಯ

2025ರ ಹೊತ್ತಿಗೆ ಭಾರತ ವಿಶ್ವದಲ್ಲಿ 5ನೇ, 2030ರ ಹೊತ್ತಿಗೆ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಸಿಇಬಿಆರ್ ವರದಿ

Sumana Upadhyaya

ನವದೆಹಲಿ: ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ಭಾರತದ ಆರ್ಥಿಕತೆ ಪ್ರಸಕ್ತ ವರ್ಷ 6ನೇ ಸ್ಥಾನಕ್ಕೆ ಇಳಿಕೆಯಾಗಿದೆ. ಅದು 2025ರಲ್ಲಿ ಇಂಗ್ಲೆಂಡ್ ನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ ಮತ್ತು 2030ಕ್ಕೆ ಮೂರನೇ ಸ್ಥಾನಕ್ಕೆ ಸ್ಪರ್ಧಿಸಲಿದೆ ಎಂದು ಚಿಂತಕರ ವೇದಿಕೆ ತಿಳಿಸಿದೆ.

ಕೊರೋನಾ ಲಾಕ್ ಡೌನ್ ಕಾರಣದಿಂದ ಪ್ರಸಕ್ತ ವರ್ಷ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ. ಕಳೆದ ವರ್ಷ ಇಂಗ್ಲೆಂಡ್ ನ್ನು ಹಿಂದಿಕ್ಕಿತ್ತು, ಆದರೆ ಈ ವರ್ಷ ಇಂಗ್ಲೆಂಡ್ ಭಾರತವನ್ನು ಹಿಂದಿಕ್ಕಿದೆ. ಅದು 2024ರವರೆಗೆ ಮುಂದುವರಿಯಲಿದೆ ಎಂದು ಎಕನಾಮಿಕ್ಸ್ ಅಂಡ್ ಬ್ಯುಸ್ ನೆಸ್ ರಿಸರ್ಚ್ ಸೆಂಟರ್(ಸಿಇಬಿಆರ್) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಭಾರತದ ಆರ್ಥಿಕತೆ ಮುಂದಿನ ವರ್ಷ ಶೇಕಡಾ 9 ರಷ್ಟಾಗಲಿದ್ದು, 2022ರ ಹೊತ್ತಿಗೆ ಶೇಕಡಾ 7 ರಷ್ಟಾಗಲಿದೆ.

ಭಾರತ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿ ಹೊಂದಿರುವುದರಿಂದ ಸಹಜವಾಗಿ ಬೆಳವಣಿಗೆ ನಿಧಾನವಾಗಿರುತ್ತದೆ. ವಾರ್ಷಿಕ ಜಿಡಿಪಿ ಬೆಳವಣಿಗೆ 2035ರ ಹೊತ್ತಿಗೆ ಶೇಕಡಾ 5.8ಕ್ಕೆ ಕುಸಿಯಲಿದೆ, 2030ರ ಹೊತ್ತಿಗೆ ಭಾರತ ವಿಶ್ವದಲ್ಲಿ 3ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಬೆಳವಣಿಗೆಯಾಗಲಿದೆ. 2025ರಲ್ಲಿ ಇಂಗ್ಲೆಂಡ್ ನ್ನು, ಜರ್ಮನಿಯನ್ನು 2027ರಲ್ಲಿ ಮತ್ತು ಜಪಾನ್ ನ್ನು 2030ರಲ್ಲಿ ಹಿಂದಿಕ್ಕಲಿದೆ ಎಂದು ವರದಿ ತಿಳಿಸಿದೆ.

SCROLL FOR NEXT