ವಾಣಿಜ್ಯ

ಪೂರ್ವ ಪಾವತಿಗೆ ತಕ್ಕಂತೆ ವಿದ್ಯುತ್ ಪೂರೈಕೆ ಕ್ರಮ ಸೂಕ್ತವಲ್ಲ : ಎಐಪಿಇಎಫ್

Srinivas Rao BV

ಲಕ್ನೋ: ಮುಂದಿನ ಮೂರು ವರ್ಷಗಳಲ್ಲಿ ಬಹುವಿಧ ವಿದ್ಯುತ್ ಪೂರೈಕೆ ಆಯ್ಕೆ ಮತ್ತು ಪೂರ್ವಪಾವತಿ ಸ್ಮಾರ್ಟ್ ಮೀಟರ್ ಪರಿಕಲ್ಪನೆ ಸೂಕ್ತವಲ್ಲ ಎಂದು ಅಖಿಲ ಭಾರತ ಪವರ್ ಎಂಜಿನಿಯರ್ಸ್ ಫೆಡರೇಷನ್ ಶನಿವಾರ ಟೀಕಿಸಿದೆ. 

ಬಜೆಟ್ ನಲ್ಲಿ ಘೋಷಿಸಿರುವ ಪೂರ್ವ ಪಾವತಿ ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು ಪ್ರತಿಕ್ರಯಿಸಿರುವ ಒಕ್ಕೂಟ ಇದಕ್ಕೆ ಹೆಚ್ಚು ವೆಚ್ಚವಾಗಲಿದ್ದು ಪೂರ್ವ ಪಾವತಿಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಿ, ನೀಡಿದ ಹಣಕ್ಕೆ ತಕ್ಕ ವಿದ್ಯುತ್ ಬಳಸಿದ ಕೂಡಲೇ ದಿಢೀರ್ ವಿದ್ಯುತ್ ಕಡಿತ ಉಂಟಾಗುವುದು ಎಷ್ಟರ ಮಟ್ಟಿಗೆ ನ್ಯಾಯೋಚಿತ ಎಂದು ಪ್ರಶ್ನಿಸಿದೆ.
 

SCROLL FOR NEXT