ವಾಣಿಜ್ಯ

ಬ್ಯಾಂಕ್ ಎಟಿಎಂಗಳಲ್ಲಿ 2000 ರೂ. ನೋಟುಗಳು ಮಾಯಾ, ಬ್ಯಾನ್ ಆಗುತ್ತಾ ಪಿಂಕ್ ನೋಟ್!

Vishwanath S

ನವದೆಹಲಿ: ಸದ್ಯ ಬ್ಯಾಂಕ್ ಎಟಿಎಂಗಳಲ್ಲಿ 2000 ಮುಖ ಬೆಲೆಯ ನೋಟುಗಳು ಕಡಿಮೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಪಿಂಕ್ ನೋಟ್ ಗಳು ಸಹ ಬ್ಯಾನ್ ಆಗಲಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ. 

ಸದ್ಯ ಈ ಆತಂಕಕ್ಕೆ ಬ್ಯಾಂಕ್ ಗಳು ಸ್ಟಷ್ಟೀಕರಣ ನೀಡಿದ್ದು ಚಿಲ್ಲರೆ ಪಡೆಯಲು ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದು ಇದನ್ನು ತಪ್ಪಿಸುವ ಸಲುವಾಗಿ 2 ಸಾವಿರ ನೋಟುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿವೆ. 

2 ಸಾವಿರ ನೋಟುಗಳು ಬದಲಿಗೆ 500 ರುಪಾಯಿ ನೋಟುಗಳನ್ನು ಹೆಚ್ಚಾಗಿ ತುಂಬಿಸಲಾಗುತ್ತಿದೆ. ಎಟಿಎಂಗಳಲ್ಲಿನ 2000 ನೋಟುಗಳ ಕ್ಯಾಸೆಟ್ ಗಳನ್ನು ಬದಲಾಯಿಸಲಾಗಿದೆ. ಇನ್ನು ವರ್ಷದೊಳಗೆ ಎಲ್ಲಾ ಎಟಿಎಂಗಳಲ್ಲೂ ಎರಡು ಸಾವಿರ ನೋಟು ಗಳು ವಿತ್ ಡ್ರಾವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿವೆ. 

SCROLL FOR NEXT