ವಾಣಿಜ್ಯ

ಎರಡು ತಿಂಗಳಲ್ಲಿ 26 ಲಕ್ಷ ಮ್ಯಾನ್ ಅವರ್ ನಷ್ಟ: ಎಚ್‌ಎಎಲ್ ಅಧ್ಯಕ್ಷ  ಆರ್ ಮಾಧವನ್

Raghavendra Adiga

ಬೆಂಗಳೂರು: ಕೊರೋನಾ ಹೆಮ್ಮಾರಿ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಕಾರಣ ಭಾರತ ಹಾಗೂ ವಿದೇಶಗಳಲ್ಲಿ ಪೂರೈಕೆ ಸರಪಳಿಯಲ್ಲಿ ವ್ಯತ್ಯಾಸಗಳಾಗಲಿದ್ದು ಪರಿಣಾಮ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಲ್ಲಿ ನಡೆಯುತ್ತಿರುವ ಅನೇಕ ರಕ್ಷಣಾ ಯೋಜನೆಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

ಎಚ್‌ಎಎಲ್ ಅಧ್ಯಕ್ಷ ಮತ್ತು ಎಂಡಿ ಆರ್. ಮಾಧವನ್ ಮಾತನಾಡಿ "ಉಪ ಗುತ್ತಿಗೆದಾರರು, ಹೆಚ್ಚಾಗಿ ಎಂಎಸ್‌ಎಂಇಗಳು ಮತ್ತು ಕೆಲವು ದೊಡ್ಡ ಸಂಸ್ಥೆಗಳಿಂದ ವಸ್ತುಗಳನ್ನು ಪಡೆಯುವುದು ನಮ್ಮ ಯೋಜನೆಗಳಿಗೆ ನಿರ್ಣಾಯಕವಾಗಿದೆ " ಎಂದಿದ್ದಾರೆ.

"ನಾವು ಕಳೆದ ಎರಡು ತಿಂಗಳಲ್ಲಿ 26 ಲಕ್ಷ ಮಾನವ ಕೆಲಸದ ಗಂಟೆ ಅವಧಿಯನ್ನು ಕಳೆದುಕೊಂಡಿದ್ದೇವೆ. ಪ್ರಸ್ತುತ ಪರಿಸ್ಥಿತಿ ಸರಿಹೋಗುವವರೆಗೆ ಇದು ಮುಂದುವರಿಯಲಿದೆ. . ಆದರೆ ನಮ್ಮ ಮುಖ್ಯ ಸಮಸ್ಯೆ ಸರಬರಾಜು ಸರಪಳಿಯಾಗಿದೆ." 

 ಪ್ರಸ್ತುತ ನಡೆಯುತ್ತಿರುವ ಯೋಜನೆಗಳಾದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ತೇಜಸ್, ಸು -30 ಎಂಕೆಐ ರಿಪೇರಿ ಮತ್ತು ಕೂಲಂಕುಷ ಪರೀಕ್ಷೆ, ವಿನ್ಯಾಸಗೊಳಿಸಲಾದ ಪಿಎಸ್‌ಯು  ಮತ್ತು ಅಭಿವೃದ್ಧಿಪಡಿಸಿದ ಇಂಟರ್ಮೀಡಿಯೆಟ್ ಜೆಟ್ ಟ್ರೈನರ್ ಮತ್ತು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಗಳು ಯಾಶಸ್ವಿಯಾಗಿ ಪೂಐಕೆಯಾಗುವ ನಿರೀಕ್ಷೆ ಇದೆ ಎಂದು ಮಾಧವನ್ ಹೇಳಿದ್ದಾರೆ. 

SCROLL FOR NEXT