ವಾಣಿಜ್ಯ

ಕೊರೋನಾ ನಡುವೆ ಉದ್ಯೋಗಗಳಿಗೆ ಕತ್ತರಿ ಇಲ್ಲ: ವಿಪ್ರೋ ಸ್ಪಷ್ಟನೆ 

Srinivas Rao BV

ಬೆಂಗಳೂರು: ಕೊರೋನಾ ನಡುವೆ ಉದ್ಯೋಗಗಳಿಗೆ ಈವರೆಗೂ ಕತ್ತರಿ ಹಾಕಿಲ್ಲ, ಇನ್ನು ಮುಂದೆ ಹಾಕುವ ಯೋಜನೆಯೂ ಇಲ್ಲ ಎಂದು ಜಾಗತಿಕ ಸಾಫ್ಟ್ ವೇರ್ ದೈತ್ಯ ವಿಪ್ರೋ ಸ್ಪಷ್ಟಪಡಿಸಿದೆ. 

ಸಂಸ್ಥೆಯ 74 ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ವಿಡಿಯೋ ಸಭೆಯಲ್ಲಿ ಮಾತನಾಡಿರುವ ಸಂಸ್ಥೆಯ ರಿಷದ್ ಪ್ರೇಮ್ ಜಿ, ಕೊರೋನಾ ಎದುರಾದ ನಂತರ ಸಂಸ್ಥೆಯಿಂದ ಒಬ್ಬನೇ ಒಬ್ಬ ಉದ್ಯೋಗಿಯನ್ನೂ ತೆಗೆದುಹಾಕಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ ಎಂದಿದ್ದಾರೆ.

ಮಹಿಳಾ ಷೇರುದಾರರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಪ್ರೇಮ್ ಜಿ "ಈ ಕ್ಷಣದವರೆಗೂ ಉದ್ಯೋಗ ಕಡಿತದ ಬಗ್ಗೆ ಯಾವ ಯೋಜನೆಯೂ ಇಲ್ಲ ಎಂದು ಹೇಳಿದ್ದಾರೆ. ಕಾರ್ಯನಿರ್ವಹಣೆ ಹಾಗೂ ಬೇರೆ ಮಾರ್ಗಗಳ ಮೂಲಕ ನಾವು ವೆಚ್ಚಗಳನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದೇವೆ ಎಂದು ರಿಷದ್ ಪ್ರೇಮ್ ಜಿ ಹೇಳಿದ್ದಾರೆ.  ಬೆಂಗಳೂರು ಮೂಲದ ಐಟಿ ಸಂಸ್ಥೆಯಾಗಿರುವ ವಿಪ್ರೋ, ಜಾಗತಿಕ ಮಟ್ಟದಲ್ಲಿ 1.75 ಲಕ್ಷ ಜನರಿಗೆ ಉದ್ಯೋಗ ನೀಡಿದೆ.

SCROLL FOR NEXT