ವಾಣಿಜ್ಯ

ಗಡಿ ಪ್ರಕ್ಷುಬ್ಧತೆ ನಡುವೆಯೂ ಭಾರತದಿಂದ ಚೀನಾಗೆ ಪಿವಿಸಿ ರಫ್ತು ಸಾರ್ವಕಾಲಿಕ ಅಧಿಕ!

Srinivas Rao BV

ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದರ ಪರಿಣಾಮ ಚೀನಾದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಕಡಿಮೆ ಮಾಡುವ ಕರೆಗಳ ನಡುವೆಯೂ ಭಾರತದಿಂದ ಚೀನಾಗೆ ರಫ್ತಾಗುತ್ತಿದ್ದ  ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ)ಗಳ ಪ್ರಮಾಣ ದಾಖಲೆಯ ಏರಿಕೆ ಕಂಡಿದೆ. 

ಕೋವಿಡ್-19 ಲಾಕ್ ಡೌನ್ ಅವಧಲ್ಲಿ ಪಿವಿಸಿ ರಫ್ತನ್ನು ಉತ್ತೇಜಿಸಿತ್ತು. ಆದರೆ ಜೂನ್ ತಿಂಗಳಲ್ಲಿ ಈಶಾನ್ಯ ಲಡಾಖ್ ನಲ್ಲಿ ಚೀನಾ ಭಾರತೀಯ ಯೋಧರ ಹತ್ಯೆ ಘಟನೆಯ ಬಳಿಕ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ-ವಹಿವಾಟು ಸಂಬಂಧ ಹದಗೆಟ್ಟಿತ್ತು. ಆದಾಗ್ಯೂ ಮೇ ತಿಂಗಳಲ್ಲಿ ಚೀನಾಗೆ ರಫ್ತಾದ ಪಿವಿಸಿಗಿಂತ 5 ಪಟ್ಟು ಹೆಚ್ಚು ಪಿವಿಸಿ ಜೂನ್ ತಿಂಗಳಲ್ಲಿ ರಫ್ತಾಗಿದೆ ಎಂದು ಗ್ಲೋಬಲ್ ರಬ್ಬರ್ ಮಾರುಕಟ್ಟೆ ವರದಿ ಪ್ರಕಟಿಸಿದೆ. 

ಇದು ಅತ್ಯಂತ ಅಪರೂಪದ ಬೆಳವಣಿಗೆ, ಲಾಕ್ ಡೌನ್ ಅವಧಿಯಲ್ಲಿ ಭಾರತದ ಪಿವಿಸಿ ಬೇಡಿಕೆ ಇಳಿದಿತ್ತು. ಪೂರೈಕೆದಾರರು ತಮ್ಮ ಸರಕುಗಳನ್ನು ಚೀನಾಗೆ ಕಳಿಸಬೇಕಾಯಿತು ಎಂದು ವರದಿ ಪ್ರಕಟಿಸಿದೆ. ಭಾರತ ಸರ್ಕಾರ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಸರಕುಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಿ,  ಚೀನಾ ಆಪ್ ಗಳಿಗೆ ನಿಷೇಧ ವಿಧಿಸಿದ್ದ ಸಂದರ್ಭದಲ್ಲೇ ಚೀನಾಗೆ ಭಾರತದ ಪಿವಿಸಿ ರಫ್ತು ಪ್ರಮಾಣ ಏರಿಕೆ ಕಂಡಿದೆ. 

SCROLL FOR NEXT