ವಾಣಿಜ್ಯ

ಕೊರೋನಾ ಸಂಕಷ್ಟದ ನಡುವೆಯೂ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸಂಭಾವನೆಯಲ್ಲಿ ಶೇ.27 ಹೆಚ್ಚಳ

Raghavendra Adiga

ಬೆಂಗಳೂರು: ಜಾಗತಿಕ ಸಾಪ್ಟ್ ವೇರ್ ವಹಿವಾಟು ಕಂಪನಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರ 2019-20ರ ಆರ್ಥಿಕ ವರ್ಷದ ಒಟ್ತಾರೆ ಸಂಬಾವನೆ ಶೇ. 27ರಷ್ಟು ಹೆಚ್ಚಳವಾಗಿದ್ದು 6.15 ದಶಲಕ್ಷಕ್ಕೆ ತಲುಪಿದೆ.  ಹಾಗೆಯೇ, ಸಿಒಒ ಪ್ರವೀಣ್ ರಾವ್ ಅವರ ಕಾಂಪೋನ್ಸೇಷನ್ ಸಹ ಶೇ. 29ರಷ್ಟು ಹೆಚ್ಚಳವಾಗಿದ್ದು ಸುಮಾರು  2.3 ದಶಲಕ್ಷಕ್ಕೆ ತಲುಪಿದೆ.

ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪರೇಖ್‌ಗೆ ಹೆಚ್ಚಿನ ಸಂಖ್ಯೆಯ ಕಾರ್ಯಕ್ಷಮತೆ ಆಧಾರದಲ್ಲಿ ನಿರ್ಬಂಧಿತ ಸ್ಟಾಕ್ ಯುನಿಟ್ ಗಳನ್ನು ನೀಡಲಾಗಿದೆ.

ಮಂಜೂರು ಮಾಡಿದ ಆರ್‌ಎಸ್‌ಯುಗಳು ಮೌಲ್ಯದಲ್ಲಿ ಶೇ.50ಕ್ಕಿಂತ ಹೆಚ್ಚಾಗಿದ್ದು ಅವರ ಸ್ಥಿರ ವೇತನದಲ್ಲಿ ತುಸು ಕಡಿತ ಮಾಡಲಾಗಿದೆ. ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣ್ 2017ರ ಆಗಸ್ಟ್ ನಲ್ಲಿ ಅಧಿಕಾರ ವಹಿಸಿಕೊಂಡಾಗ ನೀಡಿದ ಭರವಸೆಗೆ ಬದ್ಧರಾಗಿ ಯಾವುದೇ ಕಾಂಪೋನ್ಸೇಷನ್ ಪಡೆದುಕೊಂಡಿಲ್ಲ.

ಇನ್ನೊಂದೆಡೆ ಸುಮಾರು 30,000 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ವಿತರಣಾ ವ್ಯವಸ್ಥಾಪಕರು, ಸಹಾಯಕ ಉಪಾಧ್ಯಕ್ಷರು, ಹಿರಿಯ ಉಪಾಧ್ಯಕ್ಷರು ಮತ್ತಿತರರು ಸೇರಿದಂತೆ ಉನ್ನತ ಮಟ್ಟದಲ್ಲಿ  ಕಂಪನಿಯು ನೌಕರರನ್ನು ಕಡಿತ ಮಾಡುತ್ತಿದೆ  ಎಂದು ವರದಿಯಾಗಿದೆ.

ಜೆಎಲ್ -7 ಮತ್ತು ಅದಕ್ಕಿಂತ ಹೆಚ್ಚಿನ ಸಿಬ್ಬಂದಿಗಳಲ್ಲಿ 15% ಸಿಬ್ಬಂದಿಯನ್ನು ವಜಾಗೊಳಿಸಲು ಐಟಿ ದಿಗ್ಗಜ ಸಂಸ್ಥೆ ಯೋಜಿಸಿದೆ ಎನ್ನಲಾಗಿದ್ದು ಇದು ನೇರವಾಗಿ 13,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ.

SCROLL FOR NEXT