ವಾಣಿಜ್ಯ

ಸಣ್ಣ ರೆಸ್ಟೋರೆಂಟ್ ಗಳಿಗೆ ಸಹಾಯ ಮಾಡಲು ಸ್ವಿಗ್ಗಿ-ಜೊಮ್ಯಾಟೋ ಜೊತೆಗೆ ಇನ್ಸ್ಟಾಗ್ರಾಮ್ ಒಪ್ಪಂದ 

Srinivas Rao BV

ಕೋವಿಡ್-19 ಸಂದರ್ಭದಲ್ಲಿ ಆಹಾರ ಪೂರೈಕೆ ಕ್ಷೇತ್ರದಲ್ಲಿರುವ ಸಣ್ಣ ಉದ್ಯಮಗಳಿಗೆ ಸಹಾಯವಾಗುವಂತೆ ಮಾಡಲು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಸ್ವಿಗ್ಗಿ ಹಾಗೂ ಜೊಮ್ಯಾಟೋದೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ. 

ಇದಕ್ಕಾಗಿ ಇನ್ಸ್ಟಾಗ್ರಾಮ್ ನಲ್ಲಿ ಫುಡ್ ಆರ್ಡರ್ ಸ್ಟಿಕರ್ ನ್ನು ಪರಿಚಯಿಸಿದ್ದು, ಇದು ಸ್ಥಳೀಯ ರೆಸ್ಟೋರೆಂಟ್ ಹಾಗೂ ಆಹಾರ ಪೂರೈಕೆ ಉದ್ಯಮಗಳಿಗೆ ತಮ್ಮ ಗ್ರಾಹಕರೊಂದಿಗೆ ಸಂಪರ್ಕದಲ್ಲಿರುವುದಕ್ಕೆ ಅನುವುಮಾಡಿಕೊಡಲಿದೆ. 

ರೆಸ್ಟೋರೆಂಟ್ ಗಳು ತಮ್ಮ ಸ್ಟೋರಿ ವಿಭಾಗದಲ್ಲಿ ಫುಡ್ ಸ್ಟಿಕರ್ ನ್ನು ಹಾಕಬಹುದಾಗಿದೆ, ಇದನ್ನು ನೋಡುವ ಗ್ರಾಹಕರು ಆರ್ಡರ್ ನೀಡಬಹುದಾಗಿದ್ದು, ಸ್ವಿಗ್ಗಿ ಹಾಗೂ ಜೊಮ್ಯಾಟೋ ಇವುಗಳನ್ನು ಮನೆಗೆ ತಲುಪಿಸಲಿದೆ ಎಂದು ಇನ್ಸ್ಟಾಗ್ರಾಮ್ ನ ಮಾತೃಸಂಸ್ಥೆ ಫೇಸ್ ಬುಕ್ ನ ಇ-ಕಾಮರ್ಸ್ ಹಾಗೂ ರಿಟೇಲ್ ಇಂಡಸ್ಟ್ರಿ ಮುಖ್ಯಸ್ಥ ನಿತಿನ್ ಚೋಪ್ರಾ ತಿಳಿಸಿದ್ದಾರೆ. 

ಈ ಸ್ಟಿಕರ್ ನ್ನು ಬಳಕೆ ಮಾಡಲು ಉದ್ಯಮಗಳು ಇನ್ಸ್ಟಾಗ್ರಾಮ್ ನ ಇತ್ತೀಚಿನ ಆಪ್ ನ್ನು ಹೊಂದಿರಬೇಕಾಗುತ್ತದೆ  ಹಾಗೂ ಇನ್ಸ್ಟಾಗ್ರಾಮ್ ಬ್ಯುಸಿನೆಸ್ ಅಥವಾ ಕ್ರಿಯೇಟರ್ ಖಾತೆಗಳನ್ನು ಹೊಂದಿ, ಜೊಮ್ಯಾಟೋ ಅಥವಾ ಸ್ವಿಗ್ಗಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. 

SCROLL FOR NEXT