ವಾಣಿಜ್ಯ

ಭಾರತದ 21-22 ನೇ ಸಾಲಿನ ಜಿಡಿಪಿ ಶೇ.9.5 ಕ್ಕೆ ಪುಟಿದೇಳಲಿದೆ: ಫಿಚ್ 

Srinivas Rao BV

ನವದೆಹಲಿ: 20-21 ನೇ ಸಾಲಿನ ಆರ್ಥಿಕ ವರ್ಷದ ಕುಸಿತದ ನಡುವೆಯೇ ಭಾರತೀಯರಿಗೆ ಸಂತಸ ವಿಷಯವೊಂದು ಬಹಿರಂಗಗೊಂಡಿದ್ದು, 21-22 ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.9.5 ಕ್ಕೆ ಪುಟಿದೇಳಲಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ. 

ಜೂ.10 ರಂದು ಪ್ರಕಟಿಸಿರುವ ತನ್ನ ವರದಿಯಲ್ಲಿ ಭಾರತದ ಜಿಡಿಪಿ ಅಂದಾಜನ್ನು ಫಿಚ್ ರೇಟಿಂಗ್ಸ್ ನೀಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ.5 ರಷ್ಟು ಕುಸಿಯಲಿದೆ ಎಂದು ಹೇಳಿದೆ. 

"ಕೋವಿಡ್ -19 ಸಾಂಕ್ರಾಮಿಕ ದೇಶದ ಬೆಳವಣಿಗೆಯನ್ನು ದುರ್ಬಲಗೊಳಿಸಿದ್ದು, ಸರ್ಕಾರದ ಮೇಲಿರುವ ಭಾರಿ ಸಾಲದಿಂದ ಅನೇಕ ಸವಾಲುಗಳು ಸಹ ಉದ್ಭವಿಸಿವೆ ಎಂದು ಏಷ್ಯಾ ಪೆಸಿಫಿಕ್ ಕ್ರೆಡಿಟ್ ಓವರ್ ರಿವ್ಯೂ ನಲ್ಲಿ ಫಿಚ್ ಹೇಳಿದೆ 

SCROLL FOR NEXT