ವಾಣಿಜ್ಯ

ಎಟಿಎಂ ಸೇವಾ ಶುಲ್ಕದ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಲೆಹಾಕಿದ ಮೊತ್ತ ಎಷ್ಟು ಗೊತ್ತಾ?

Srinivasamurthy VN

ನವದೆಹಲಿ: ನೀರವ್ ಮೋದಿ ಪ್ರಕರಣ ಮತ್ತು ಆಡಿ ಕಾರು ಖರೀದಿ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ಸೇವಾ ಶುಲ್ಕದ ಮೂಲಕ ಸುಮಾರು ನೂರಾರು ಕೋಟಿ ರೂಗಳನ್ನು ಸಂಗ್ರಹಿಸಿದೆ.

ಹೌದು... ಮೂಲಗಳ ಪ್ರಕಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ಸೇವಾ ಶುಲ್ಕ ಮತ್ತು ವಾರ್ಷಿಕ ಸೇವಾ ಶುಲ್ಕದ ನೆಪದಲ್ಲಿ 268 ಕೋಟಿ ರೂಗಳನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ. ಸಾರ್ವಜನಿಕ ವಲಯ  ಬ್ಯಾಂಕ್ ಗಳು ಸೇವಾ ಶುಲ್ಕದ ಹೆಸರಿನಲ್ಲಿ ವಾರ್ಷಿಕ ಎಷ್ಟು ಹಣ ಸಂಗ್ರಹಿಸುತ್ತಿದೆ ಎಂದು ಕೋರಿ ಮಧ್ಯ ಪ್ರದೇಶ ಮೂಲದ ಆರ್ ಟಿಐ ಕಾರ್ಯಕರ್ತ ಚಂದ್ರಶೇಖರ ಗೌರ್ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಇದೀಗ ಉತ್ತರ ಬಂದಿದ್ದು, ಈ ಪೈಕಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ಸೇವಾ ಶುಲ್ಕ ಮತ್ತು ವಾರ್ಷಿಕ ಸೇವಾ ಶುಲ್ಕದ ನೆಪದಲ್ಲಿ 268 ಕೋಟಿ ರೂಗಳನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್  ಎಟಿಎಂ ಕಾರ್ಡ್ ಗಳ ಸೇವಾ ಶುಲ್ಕದ ಹೆಸರಿನಲ್ಲಿ ವಾರ್ಷಿಕ 150 ರೂಗಳನ್ನು ಪ್ರತೀ ಗ್ರಾಹಕನಿಂದ ಸಂಗ್ರಹಿಸಿದೆ. ಇದಲ್ಲದೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು, ಮುದ್ರಾ, ಪಿಎಂಜೆಡಿವೈ ಕಾರ್ಡ್ ಗಳಿಗೆ ಯಾವುದೇ ರೀತಿಯ ಸೇವಾ ಶುಲ್ಕ ವಿಧಿಸಿಲ್ಲ ಎಂದು ತಿಳಿದುಬಂದಿದೆ.

ಅಲ್ಲದೆ ಕನಿಷ್ಠ ಮೊತ್ತ ನಿರ್ವಹಣೆ ಮಾಡದ ಕಾರಣದಿಂದಲೂ ಗ್ರಾಹಕರಿಂದ ಶುಲ್ಕ ಪಡೆಯಲಾಗಿದ್ದು, ಈ ಬಗ್ಗೆ ಬ್ಯಾಂಕ್ ನಿಂದ ಯಾವುದೇ ಮಾಹಿತಿ ದೊರೆತಿಲ್ಲ. ಆರ್ ಟಿಐ 2005 ಅಡಿಯಲ್ಲಿ ಈ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಸಬೂಬು ಹೇಳಿದೆ ಎನ್ನಲಾಗಿದೆ.

SCROLL FOR NEXT