ವಾಣಿಜ್ಯ

2019 ರಲ್ಲಿ 51 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ: ಅತಿ ಹೆಚ್ಚು ಎಫ್ ಡಿಐ ಪಡೆದ 9 ನೇ ರಾಷ್ಟ್ರ ಭಾರತ! 

Srinivas Rao BV

ವಿಶ್ವಸಂಸ್ಥೆ: 2019 ನೇ ಸಾಲಿನಲ್ಲಿ ಭಾರತಕ್ಕೆ 51 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ ಹರಿದುಬಂದಿದ್ದು, ಎಫ್ ಡಿಐ ನಲ್ಲಿ ಅತಿ ಹೆಚ್ಚು ಗಳಿಸಿದ 9 ನೇ ಅತಿ ದೊಡ್ಡ ರಾಷ್ಟ್ರ ಭಾರತವಾಗಿದೆ. 

ವಿಶ್ವಸಂಸ್ಥೆಯ ವ್ಯಾಪರ ವಿಭಾಗ ಯುಎನ್ ಸಿಟಿಎಡಿ ಈ ಬಗ್ಗೆ ವರದಿ ಪ್ರಕಟಿಸಿದ್ದು, ಕೋವಿಡ್-19 ಸಾಕ್ರಾಮಿಕೋತ್ತರ ಅವಧಿಯಲ್ಲಿ ಭಾರತ ಕಡಿಮೆ ಪ್ರಮಾಣದ ಆದರೆ ಸಕಾರಾತ್ಮಕ ಆರ್ಥಿಕ ಬೆಳವಣಿಗೆ ಸಾಧಿಸಲಿದ್ದು, ಭಾರತದ ಅತಿ ದೊಡ್ಡ ಮಾರುಕಟ್ಟೆ ಹೂಡಿಕೆಯನ್ನು ಆಕರ್ಷಿಸುವುದನ್ನು ಮುಂದುವರೆಸಲಿದೆ ಎಂದು ತನ್ನ ವಿಶ್ವ ಹೂಡಿಕೆ ವರದಿ 2020 ರಲ್ಲಿ ಹೇಳಿದೆ. 

2018 ರಲ್ಲಿ ಬಂದಿದ್ದಕ್ಕಿಂತ 42 ಬಿಲಿಯನ್ ಡಾಲರ್ ನಷ್ಟು ಹೆಚ್ಚುವರಿ ಎಫ್ ಡಿಐ ಹರಿದುಬಂದಿದೆ. ಏಷ್ಯಾದ ಭಾಗದಲ್ಲಿ ಭಾರತ ಅತಿ ಹೆಚ್ಚು ಎಫ್ ಡಿಐ ಗಳಿಸಿದ 5 ನೇ ಟಾಪ್ ರಾಷ್ಟ್ರವಾಗಿ ಹೊರಹೊಮ್ಮಿದೆ, ಇನ್ನು ಜಾಗತಿಕ ಹೂಡಿಕೆ 2019 ಕ್ಕೆ ಹೋಲಿಕೆ ಮಾಡಿದರೆ 2020 ರಲ್ಲಿ ಶೇ.40 ರಷ್ಟು ಕುಗ್ಗಲಿದೆ ಎಂದು ವರದಿ ತಿಳಿಸಿದೆ. 

SCROLL FOR NEXT