ಸಂಗ್ರಹ ಚಿತ್ರ 
ವಾಣಿಜ್ಯ

ಅನಿವಾಸಿ ಭಾರತೀಯರಲ್ಲಿ ಊರಿಗೆ ಮರಳುವ ಬಯಕೆ! ಮಂಗಳೂರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪುನಶ್ಚೇತನ

ಲಾಕ್ ಡೌನ್ ಮತ್ತು ಆರ್ಥಿಕ ಕುಸಿತದ ಹೊರತಾಗಿಯೂ ಕರಾವಳಿ ನಗರಿ ಮಂಗಳೂರಿನಲ್ಲಿ  ರಿಯಲ್ ಎಸ್ಟೇಟ್ ಕ್ಷೇತ್ರವು  ಪುಟಿದೇಳುವ ಲಕ್ಷಣ ತೋರುತ್ತಿದೆ. ಬುಕಿಂಗ್ ಮತ್ತು ಆಸ್ತಿ ನೋಂದಣಿ ಇನ್ನೂ ಆರಂಭವಾಗಿಲ್ಲವಾಗಿಯೂ  ಕಳೆದ ಕೆಲವು ವಾರಗಳಲ್ಲಿ ಹೌಸಿಂಗ್ ಫ್ಲಾಟ್‌ಗಳು ಮತ್ತು ಗೃಹ ಸಾಲಗಳ ಕುರಿತು ವಿಚಾರಣೆ ( ಎನ್ಕ್ವೇರಿ) ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಸಂಬಂಧ ಲ್ಡರ್‌

ಮಂಗಳೂರು: ಲಾಕ್ ಡೌನ್ ಮತ್ತು ಆರ್ಥಿಕ ಕುಸಿತದ ಹೊರತಾಗಿಯೂ ಕರಾವಳಿ ನಗರಿ ಮಂಗಳೂರಿನಲ್ಲಿ  ರಿಯಲ್ ಎಸ್ಟೇಟ್ ಕ್ಷೇತ್ರವು  ಪುಟಿದೇಳುವ ಲಕ್ಷಣ ತೋರುತ್ತಿದೆ. ಬುಕಿಂಗ್ ಮತ್ತು ಆಸ್ತಿ ನೋಂದಣಿ ಇನ್ನೂ ಆರಂಭವಾಗಿಲ್ಲವಾಗಿಯೂ  ಕಳೆದ ಕೆಲವು ವಾರಗಳಲ್ಲಿ ಹೌಸಿಂಗ್ ಫ್ಲಾಟ್‌ಗಳು ಮತ್ತು ಗೃಹ ಸಾಲಗಳ ಕುರಿತು ವಿಚಾರಣೆ ( ಎನ್ಕ್ವೇರಿ) ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಸಂಬಂಧ ಲ್ಡರ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಹೆಚ್ಚಿನ ಪ್ರಗತಿಯನ್ನು ಕಾಣುತ್ತಿವೆ, ಇದು ಮಧ್ಯಸ್ಥಗಾರರನ್ನು "ಪ್ರೋತ್ಸಾಹಿಸುವ" ಕ್ರಮ ಎನ್ನಲಾಗಿದೆ. 

ಫ್ಲಾಟ್‌ಗಳನ್ನು ಖರೀದಿಸಲು ಮತ್ತು ಕರಾವಳಿ ನಗರದಲ್ಲಿ ನೆಲೆಸಲು ಯೋಜಿಸುತ್ತಿರುವ ಕೊಲ್ಲಿ ರಾಷ್ಟ್ರದಲ್ಲಿರುವ ಮೂಲ ಕರಾವಳಿಗರು ಅಲ್ಲದೆ ಮುಂಬೈ ಮತ್ತು ಇತರ ಸ್ಥಳಗಳಿಂದ ಅಪಾರ ಸಂಖ್ಯೆಯ ಎನ್‌ಆರ್‌ಐಗಳು ಮಂಗಳೂರಿಗೆ ಮರಳಲು ಸಜ್ಜಾಗುತ್ತಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಗೃಹ ಸಾಲದ ಬಡ್ಡಿ ಕಡಿತ, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಸಾಲ ಸಬ್ಸಿಡಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸುವುದು ಮತ್ತು ನಿರ್ಮಾಣ ಮತ್ತು ಕಾರ್ಮಿಕ ವೆಚ್ಚಗಳ ಏರಿಕೆಯಿಂದಾಗಿ ಮುಂಬರುವ ತಿಂಗಳುಗಳಲ್ಲಿ ಆಸ್ತಿ ಮೌಲ್ಯವು ಹೆಚ್ಚಾಗುವ ನಿರೀಕ್ಷೆ ಸಹ ಇದಕ್ಕೆ ಕಾರಣವಾಗಿದೆ. 

ಹೆಚ್ಚಿನ ಎನ್ಕ್ವೈರಿಗಳು ಕೈಗೆಟುಕುವ ವಸತಿ, ಮನೆಗಳಿಗೆ ಬರುತ್ತಿದೆ. ಅಪಾರ್ಟ್ ಮೆಂಟ್ ಪ್ರತಿ ಯೂನಿಟ್ಗೆ 25 ಲಕ್ಷದಿಂದ 50 ಲಕ್ಷ ರೂ ಇದ್ದು ಎನ್‌ಆರ್‌ಐಗಳು ಮತ್ತು ನಗರಕ್ಕೆ ಮರಳಿದ ಇತರರನ್ನು ಹೊರತುಪಡಿಸಿ, ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು ಕಡಿಮೆಯಾಗಿರುವುದರಿಂದ ಫ್ಲ್ಯಾಟ್‌ಗಳಲ್ಲಿ ಹೂಡಿಕೆ ಮಾಡಲು ಬಯಸುವ ಜನರಿದ್ದಾರೆ ಎಂದು ಬಿಲ್ಡರ್ ಪುಷ್ಪರಾಜ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಬೆಲೆಗಳು ಏರಿಕೆಯಾಗುವುದರಿಂದ ಆಸ್ತಿ ಖರೀದಿಸಲು ಇದು ಸರಿಯಾದ ಸಮಯ ಎಂದು ಅನೇಕ ಬಿಲ್ಡರ್‌ಗಳು ಹೇಳಿದ್ದಾರೆ. 75% ವಲಸೆ ಕಾರ್ಮಿಕರು ತಮ್ಮ ಸ್ಥಳೀಯ ರಾಜ್ಯಗಳಿಗೆ ಮರಳಿದ ನಂತರ ಸಿಮೆಂಟ್ ಮತ್ತು ಉಕ್ಕಿನ ಬೆಲೆ ಹೆಚ್ಚಾಗಿದೆ ಮತ್ತು ಕಾರ್ಮಿಕ ವೆಚ್ಚವು 50-70% ರಷ್ಟು ಹೆಚ್ಚಾಗಿದೆ. ಈ ಎಲ್ಲಾ ಹೊರೆಗಳನ್ನು ಮುಂದಿನ ಕೆಲ ತಿಂಗಳುಗಳಲ್ಲಿ ಗ್ರಾಹಕರ ಮೇಲೆ ವರ್ಗಾಯಿಸಲಾಗುತ್ತದೆ.

ಸರ್ಕಾರ ಘೋಷಿಸಿದ ನೋಂದಣಿ ಶುಲ್ಕ ಕಡಿತವನ್ನು ಜಾರಿಗೊಳಿಸಿದ ನಂತರ ಫ್ಲ್ಯಾಟ್‌ಗಳ ನೋಂದಣಿ ಹೆಚ್ಚಾಗಬಹುದು ಎಂದು ಮಂಗಳೂರು ಗ್ರಾಮೀಣ ಉಪ-ರಿಜಿಸ್ಟ್ರಾರ್ ಕವಿತಾ  ಹೇಳಿದ್ದಾರೆ. `25 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಆಸ್ತಿಗಳಿಗೆ 3 ಶೇಕಡಾ, ಮತ್ತು 35 ಲಕ್ಷಕ್ಕಿಂತ ಕಡಿಮೆ ವೆಚ್ಚದ ಆಸ್ತಿಗಳಿಗೆ 2 ಶೇಕಡಾ ಶುಲ್ಕ ಕಡಿತವಾಗಲಿದೆ: ಎಂದು ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT