ವಾಣಿಜ್ಯ

ಮತ್ತೆ ಏರಿದ ಇಂಧನ ದರ: ಲೀಟರ್'ಗೆ ರೂ.80 ದಾಟಿದ ಪೆಟ್ರೋಲ್

Manjula VN

ನವದೆಹಲಿ: ಸತತ 13ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಲಾಗಿದ್ದು, ಶುಕ್ರವಾರ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 56 ಪೈಸೆ ಹಾಗೂ ಡೀಸೆಲ್ ದರ 63 ಪೈಸೆ ಏರಿಕೆಯಾಗಿದೆ.

ಹೀಗಾಗಿ 13 ದಿನಗಳಲ್ಲಿ ಪೆಟ್ರೋಲ್ ರೂ.7.11 ಹಾಗೂ ಡೀಸೆಲ್ ರೂ.7.67 ಏರಿಕೆ ಕಂಡಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ ರೂ.80.89 ಹಾಗೂ ಡೀಸೆಲ್ ರೂ.73.31 ಆಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರಗಳು ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ತೈಲ ದರದಲ್ಲಿ ಹೆಚ್ಚಳ ಮಾಡುತ್ತಿವೆ. ಜೂ.7ರಿಂದ ದೈನಂದಿನ ದರ ಪರಿಷ್ಕರಣೆ ಮಾಡಲಾಗುತ್ತಿದೆ. 

SCROLL FOR NEXT