ವಾಣಿಜ್ಯ

2021ರಲ್ಲಿ ಭಾರತ ಆರ್ಥಿಕತೆ ಶೇ 4.5ರಷ್ಟು ಕುಸಿತ: ಐಎಂಎಫ್ ಅಂದಾಜು

Srinivas Rao BV

ನವದೆಹಲಿ: ಅಂತಾರಾಷ್ಟ್ರೀಯ ವಿತ್ತ ನಿಧಿ (ಐಎಂಎಫ್) ಭಾರತ ಆರ್ಥಿಕತೆಯಲ್ಲಿ ತೀವ್ರ ಕುಸಿತದ ಮುನ್ಸೂಚನೆ ನೀಡಿದ್ದು, ಕೊವಿಡ್‍- 19 ಲಾಕ್‌ಡೌನ್ ಮತ್ತು ಆರ್ಥಿಕತೆಯ ಮಂದಗತಿ ಚೇತರಿಕೆಯ ಕಾರಣದಿಂದಾಗಿ 2021 ರಲ್ಲಿ ಶೇ 4.5 ರಷ್ಟು ಕುಸಿತವಾಗುವ ಅಂದಾಜು ಮಾಡಿದೆ. 

‘ಏಪ್ರಿಲ್‌ನಲ್ಲಿ ನಿರೀಕ್ಷಿಸಿದ್ದಕ್ಕಿಂತ ಮಂದಗತಿಯ ಆರ್ಥಿಕತೆ ಚೇತರಿಕೆ ಮತ್ತು ಸುದೀರ್ಘ ಅವಧಿಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆಯು ಶೇ 4.5 ರಷ್ಟು ಸಂಕುಚಿತಗೊಳ್ಳುವ ಸಾಧ್ಯತೆ ಇದೆ.’ ಎಂದು ಐಎಂಎಫ್‍ನ ವಿಶ್ವ ಆರ್ಥಿಕ ಮುನ್ನೋಟ ವರದಿ ತಿಳಿಸಿದೆ. ಏಪ್ರಿಲ್ ವೇಳೆ ಲಭ್ಯವಿದ್ದ ಆರ್ಥಿಕ ದತ್ತಾಂಶದಂತೆ, ಕೊವಿಡ್‍-19 ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕ ಚಟುವಟಿಕೆಯಲ್ಲಿ ಭಾರೀ ಕುಸಿತವಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಹೊರಹೊಮ್ಮುತ್ತಿರುವ ಅನೇಕ ದೇಶಗಳು ಆರ್ಥಿಕತೆ ಸದೃಢತೆ ತಮ್ಮ ಬೆಂಬಲವನ್ನು ಹೆಚ್ಚಿಸಿವೆ.

ಭಾರತದಲ್ಲಿ ಉದ್ಯಮಗಳಿಗೆ ಮತ್ತು ರೈತರಿಗೆ ಸಾಲ ಮತ್ತು ಖಾತರಿಗಳ ಮೂಲಕ ನಗದೀಕರಣ ಬೆಂಬಲ ನೀಡಲಾಗಿದೆ ಎಂದು ಐಎಂಎಫ್‍ ತಿಳಿಸಿದೆ. ತೀವ್ರಗೊಳ್ಳುತ್ತಿರುವ ಕೊವಿಡ್‍ ಸೋಂಕಿನ ನಡುವೆ ಜಾಗತಿಕ ಆರ್ಥಿಕತೆಯ ಮುನ್ಸೂಚನೆಯನ್ನು ಐಎಂಎಫ್‍ ಪರಿಷ್ಕರಿಸಿದ್ದು, 2020 ರಲ್ಲಿ ಶೇ 4.9 ರಷ್ಟು ಕುಸಿತವಾಗುವ ಮುನ್ಸೂಚನೆ ನೀಡಿದೆ.

SCROLL FOR NEXT