ವಾಣಿಜ್ಯ

ಜು.10 ರಿಂದ ಕೋವಿಡ್-19 ವಿಮೆ ಕಡ್ಡಾಯಗೊಳಿಸಿದ ಐಆರ್ ಡಿಎಐ: ವಿವರಗಳು ಹೀಗಿವೆ

Srinivas Rao BV

ನವದೆಹಲಿ: ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಮೆ ನಿಯಂತ್ರಕ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ಜು.10 ರಿಂದ ಕೋವಿಡ್-19 ವಿಮೆಯನ್ನು ಕಡ್ಡಾಯವಾಗಿ ನೀಡುವಂತೆ ಎಲ್ಲಾ ವಿಮೆ ಕಂಪನಿಗಳಿಗೆ ಸೂಚನೆ ನೀಡಿದೆ. 

ಕೊರೋನಾ ಕವಚ್ ಹಾಗೂ ಕೊರೋನಾ ರಕ್ಷಕ್ ಎಂಬ ಎರಡು ರೀತಿಯ ವಿಮೆ ಪಾಲಿಸಿಗಳನ್ನು ವಿಮೆ ಕಂಪನಿಗಳು ಹೊಂದಿರಲಿವೆ.

ಈ ವಿಮೆಯ ವಿವರಗಳ ಬಗ್ಗೆ ಮಾಹಿತಿ ಹೀಗಿದೆ

ಕೊರೋನಾ ಕವಚ:  3.5 ತಿಂಗಳಿನಿಂದ-9.5 ತಿಂಗಳವರೆಗೆ ಇರಲಿರುವ ನಿಯಮಿತ ಭದ್ರತಾ ಪಾಲಿಸಿ ಇದಾಗಿದ್ದು, ಪಾಲಿಸಿ ಮಾಡಿಸಿದ ವ್ಯಕ್ತಿಗೆ ಒಂದು ವೇಳೆ ಸರ್ಕಾರಿ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆ, ಡಾಯಾಗ್ನೊಸ್ಟಿಕ್ ಕೇಂದ್ರಗಳಲ್ಲಿ ಕೊರೋನಾ ಸೋಂಕು ದೃಢಪಟ್ಟರೆ, ಐಸಿಯು ವೆಚ್ಚ, ಇಂಟೆನ್ಸೀವ್ ಕಾರ್ಡಿಯಾಕ್ ಕೇರ್ ಯುನಿಟ್ (ಐಸಿಸಿಯು) ಔಷಧಗಳ ವೆಚ್ಚ 2,000 ರೂಪಾಯಿಗಳ ವರೆಗೆ ಆಂಬುಲೆನ್ಸ್ ವೆಚ್ಚಗಳನ್ನು ಆ ವ್ಯಕ್ತಿ ಆಯ್ಕೆ ಮಾಡಿದ ವಿಮೆ ಮೊತ್ತಕ್ಕೆ ಅನುಗುಣವಾಗಿ ನೀಡಲಾಗುತ್ತದೆ.

ಮನೆಯಲ್ಲಿಯೇ ಚಿಕಿತ್ಸೆ ಪಡೆಯುವವರಿಗೂ ವಿಮೆಯ ಸೌಲಭ್ಯ ಸಿಗಲಿದ್ದು,  ಗರಿಷ್ಠ 14 ದಿನಗಳವರೆಗೆ ಪಡೆಯುವ ಚಿಕಿತ್ಸೆಯ ಮೊತ್ತವನ್ನು ವಿಮೆ ಸಂಸ್ಥೆಗಳು ಭರಿಸಲಿವೆ. ಆದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದಕ್ಕೆ ವೈದ್ಯರು ನೀಡುವುದು ಅತಗತ್ಯವಾಗಿರುತ್ತದೆ ಹಾಗೂ ಪ್ರತಿ ದಿನವೂ ಚಿಕಿತ್ಸೆ ಹಾಗೂ ಮೇಲ್ವಿಚಾರಣೆ ನಡೆದಿದೆ ಎಂಬ ಬಗ್ಗೆ ವೈದ್ಯರ ದೃಢೀಕರಣ ಅಗತ್ಯವಿರಲಿದೆ. ಈ ವಿಭಾಗದಲ್ಲಿ ಡಯಾಗ್ನೋಸ್ಟಿಕ್ ವೆಚ್ಚ, ನರ್ಸಿಂಗ್ ವೆಚ್ಚ, ಪಲ್ಸ್ ಆಕ್ಸಿ ಮೀಟರ್ ವೆಚ್ಚ, ಆಕ್ಸಿಜನ್ ಸಿಲಿಂಡರ್ ಹಾಗೂ ನೆಬ್ಯುಲೈಜರ್ ವೆಚ್ಚಗಳನ್ನು ವಿಮೆ ಕಂಪನಿಗಳು ಭರಿಸಲಿವೆ.

ಕೊರೋನಾ ಕವಚ್ ನ ಅಡಿಯಲ್ಲಿ ಆಸ್ಪತ್ರೆಗೆ ದಾಖಲಾಗುವುದಕ್ಕೂ 15 ದಿನಗಳ ಮುಂಚಿನ ವೈದ್ಯಕೀಯ ವೆಚ್ಚಗಳು ಹಾಗೂ ಆಸ್ಪತ್ರೆಯ ನಂತರ 30 ದಿನಗಳವರೆಗಿನ ವೈದ್ಯಕೀಯ ವೆಚ್ಚಗಳನ್ನು ಭರಿಸಲಾಗುತ್ತದೆ. ಆಯುಷ್ ಚಿಕಿತ್ಸೆಗಳಿಗೂ ಈ ವಿಮೆಯನ್ನು ಅನ್ವಯಗೊಳಿಸುವಂತೆ ಐಅರ್ ಡಿಎಐ ವಿಮೆ ಕಂಪನಿಗಳಿಗೆ ಸೂಚನೆ ನೀಡಿದೆ. ಕೋವಿಡ್-19 ಚಿಕಿತ್ಸೆಯ ಜೊತೆಯಲ್ಲಿ ಕೋ-ಮಾರ್ಬಿಡ್ ಕಂಡೀಷನ್ ಅಥವಾ ಈಗಾಗಲೇ ಇದ್ದ ಕೋ-ಮಾರ್ಬಿಡ್ ಕಂಡೀಷನ್ ಗೂ ಸೇರಿಸಿ ಈ ವಿಮೆ ಅನ್ವಯವಾಗಲಿದೆ ಎಂದು ಐಆರ್ ಡಿಎಐ ತಿಳಿಸಿದೆ.

ಕೊರೋನಾ ರಕ್ಷಕ್ ವಿಮೆಯ ವಿವರ ಹೀಗಿದೆ: 

ಐಆರ್ ಡಿಎಐ ಮಾರ್ಗಸೂಚಿಗಳ ಪ್ರಕಾರ ಪಾವತಿಸಲಾದ ಒಟ್ಟಾರೆ ವಿಮೆಯಲ್ಲಿ, 24 ಗಂಟೆಗಳ ನಿರಂತರ ಆಸ್ಪತ್ರೆ ಚಿಕಿತ್ಸೆಗಳಿಗೆ ಪ್ರತಿ ದಿನ ಶೇ.05 ರಷ್ಟು ವೆಚ್ಚ ಭರಿಸಲಾಗುವುದು. ಪಾಲಿಸಿ ಅವಧಿಯಲ್ಲಿ ಗರಿಷ್ಠ 15 ದಿನಗಳ ಚಿಕಿತ್ಸೆ ವೆಚ್ಚ ಭರಿಸಲಾಗುತ್ತದೆ. ಪ್ರಮಾಣಿತ ಹೆಲ್ತ್ ಪಾಲಿಸಿಯ ಅಡಿಯಲ್ಲಿ ಕನಿಷ್ಠ 50 ಸಾವಿರದ ವಿಮೆಯಿಂದ ಗರಿಷ್ಠ 5 ಲಕ್ಷದವಗಿನ ವಿಮೆ ಲಭ್ಯವಿದೆ, ಹೆಲ್ತ್ ಕೇರ್ ವರ್ಕರ್ ಗಳಿಗೆ ಶೇ.5 ರಷ್ಟು ರಿಯಾಯಿತಿ ದೊರೆಯಲಿದೆ ಎಂದು ಐಆರ್ ಡಿಎಐ ತಿಳಿಸಿದೆ.

SCROLL FOR NEXT