ವಾಣಿಜ್ಯ

ಕೊರೋನಾ ವೈರಸ್ ಭೀತಿ: ಆರ್‏ಬಿಐ ಅಭಯ, ಸತತ ಏಳು ದಿನಗಳ ಕುಸಿತದಿಂದ ಚೇತರಿಸಿಕೊಂಡ ಸೆನ್ಸೆಕ್ಸ್!

Nagaraja AB

ಮುಂಬೈ: ಕೊರೋನಾ ವೈರಸ್  ಆರ್ಥಿಕತೆ ಮೇಲೆ ಪರಿಣಾಮ ಬೀರದಂತೆ ಕ್ರಮ ಕೈಗೊಳ್ಳುವುದಾಗಿ ಆರ್ ಬಿಐ ಭರವಸೆ ನೀಡಿದ ನಂತರ ಮಂಗಳವಾರ ಸೆನ್ಸೆಕ್ಸ್ 480 ಅಂಕಗಳೊಂದಿಗೆ ಮುಕ್ತಾಯಗೊಳ್ಳುವುದರೊಂದಿಗೆ ಸತತ ಏಳು ದಿನಗಳ ಕುಸಿತದಿಂದ ಚೇತರಿಸಿಕೊಂಡಿದೆ.

ಭಾರಿ ಕುಸಿತದ ನಂತರ 30ರ ಷೇರು ಬೆಂಚ್ ಮಾರ್ಕ್ ಸೂಚ್ಯಂಕದೊಂದಿಗೆ ಸೆನ್ಸೆಕ್ಸ್  479. 68 ಅಂಕ ದಾಟುವುದರೊಂದಿಗೆ 
38, 623, 70ರಲ್ಲಿ ವಹಿವಾಟು ಅಂತ್ಯಗೊಂಡಿದೆ. ಫಾರ್ಮಾ ಸ್ಟಾಕ್ಸ್ ಮತ್ತು ಲೋಹದ ವಸ್ತುಗಳಿಂದಾಗಿ   ನಿಪ್ಟಿ ಕೂಡಾ 170.55 ಅಂಕಗಳ ಏರಿಕೆಯೊಂದಿಗೆ 11, 303, 30 ರಲ್ಲಿ ವಹಿವಾಟು ಮುಕ್ತಾಯಗೊಂಡಿದೆ.

ಸರ್ಕಾರ ರಪ್ತು ನಿಷೇಧವನ್ನು ಏರಿರುವ ಮಧ್ಯೆ ಸನ್ ಫಾರ್ಮ ಲಾಭಾಂಶದಲ್ಲಿ  ಶೇ. 6. 64 ರಷ್ಟು ಏರಿಕೆಯಾಗಿದೆ. ಟಾಟಾ ಸ್ಟಿಲ್, ಒಎನ್ ಜಿಸಿ, ಅಲ್ಟ್ರಾ ಟೆಕ್ ಸಿಮೆಂಟ್, ಪವರ್ ಗ್ರೀಡ್, ರಿಲಯನ್ಸ್, ಕೊಟಕ್ ಬ್ಯಾಂಕ್ ಮತ್ತು ಹೆಚ್ ಸಿಎಲ್  ಟೆಕ್ ಮತ್ತಿತರ ದೊಡ್ಡ ಕಂಪನಿಗಳ ಷೇರುಗಳಲ್ಲಿ  ಲಾಭ ಕಂಡುಬಂದಿದೆ. 

ಮತ್ತೊಂದೆಡೆ ಐಟಿಸಿ, ಹೆಚ್ ಡಿಎಫ್ ಸಿ ಬ್ಯಾಂಕ್ ಗಳ ಷೇರುಗಳಲ್ಲಿ ನಕಾರಾತ್ಮಕ ವಹಿವಾಟು ಕಂಡಿದೆ. ಆರ್ಥಿಕ ಮಾರುಕಟ್ಟೆಗಾಗಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ರಿಸರ್ವ್ ಬ್ಯಾಂಕ್ ಭರವಸೆ ನೀಡಿದ ನಂತರ ದೇಶಿಕ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ.

SCROLL FOR NEXT