ಶಕ್ತಿಕಾಂತ್ ದಾಸ್ 
ವಾಣಿಜ್ಯ

'ಯಸ್ ಬ್ಯಾಂಕ್ ಸಮಸ್ಯೆಯನ್ನು 30 ದಿನಗಳೊಳಗೆ ಶೀಘ್ರವೇ ಪರಿಹರಿಸುತ್ತೇವೆ: ಆರ್ ಬಿಐ ಗವರ್ನರ್ 

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯ ಯಸ್ ಬ್ಯಾಂಕ್ ನ ಶೀಘ್ರ ಪರಿಹಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಮುಂಬೈ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯ ಯಸ್ ಬ್ಯಾಂಕ್ ನ ಶೀಘ್ರ ಪರಿಹಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಯಸ್ ಬ್ಯಾಂಕಿನ ಕುರಿತು ಶೀಘ್ರವೇ ನಿರ್ಣಯ ತೆಗೆದುಕೊಳ್ಳಲಿದ್ದೇವೆ. 30 ದಿನಗಳ ಕಾಲಮಿತಿಯನ್ನು ನೀಡಲಾಗಿದ್ದರೂ ಅದರೊಳಗೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಇಂದು ಸುದ್ದಿಗಾರರಿಗೆ ತಿಳಿಸಿದರು.

ವೈಯಕ್ತಿಕ ಅಸ್ತಿತ್ವದ ಸಮಸ್ಯೆ ಮಿತಿಯಲ್ಲಿ ಮಾತ್ರವಲ್ಲದೆ ಭಾರತೀಯ ಹಣಕಾಸು ಮತ್ತು ಬ್ಯಾಂಕ್ ವಲಯಗಳ ಸ್ಥಿರತೆ ಮತ್ತು ಸ್ಥಾಪಕತ್ವವನ್ನು ನಿರ್ವಹಿಸಲು ದೊಡ್ಡ ಮಟ್ಟದಲ್ಲಿ ಯಸ್ ಬ್ಯಾಂಕ್ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗೆಂದು ನಮ್ಮ ಬ್ಯಾಂಕಿಂಗ್ ವಲಯ ಅಪಾಯದಲ್ಲಿದೆ ಎಂದು ಭಾವಿಸಬೇಕಿಲ್ಲ. ಬ್ಯಾಂಕಿಂಗ್ ವಲಯದಲ್ಲಿ ವ್ಯವಹಾರ ಸುಗಮವಾಗಿ ಮತ್ತು ಸುರಕ್ಷಿತವಾಗಿ ನಡೆಯುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಸವಾಲುಗಳನ್ನು ಆರ್ ಬಿಐ ಸಮರ್ಥವಾಗಿ ಎದುರಿಸಲಿದೆ ಎಂದು ಕೂಡ ಶಕ್ತಿಕಾಂತ್ ದಾಸ್ ಹೇಳಿದರು.

ಯಸ್ ಬ್ಯಾಂಕ್ ಕುರಿತ ನಿರ್ಧಾರಕ್ಕೆ ತೆಗೆದುಕೊಂಡ ಮಿತಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರ್ ಬಿಐ ಅವಧಿಗಿಂತ ಮುನ್ನವೇ ಅಥವಾ ಹೆಚ್ಚು ಸಮಯ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಸಾಮಾನ್ಯ ನಂಬಿಕೆಯಿದೆ. ಆದರೆ ನಾವು ಯಸ್ ಬ್ಯಾಂಕ್ ವಿಚಾರದಲ್ಲಿ ಶೀಘ್ರವೇ ಪರಿಹಾರ ನಿರ್ಧಾರಕ್ಕೆ ಬರಲಿದ್ದೇವೆ ಎಂದರು.

ಮಾರುಕಟ್ಟೆ ಆಧಾರಿತ ಅಥವಾ ಬ್ಯಾಂಕ್ ಆಧಾರಿತ ನಿರ್ಣಯ ಸಮಸ್ಯೆಗೆ ಪರಿಹಾರ ಯಾವಾಗಲೂ ಉತ್ತಮವಾದದ್ದು. ಬ್ಯಾಂಕಿನ ವ್ಯವಸ್ಥಾಪಕರಿಗೆ ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಲು ಸಮಯ ನೀಡಬೇಕು. ಬ್ಯಾಂಕು ಕ್ರಮಗಳನ್ನು ಕೈಗೊಂಡಿದೆ ಕೂಡ. ನಾವು ಕಾಯುವುದಕ್ಕೆ ಸಾಧ್ಯವಿಲ್ಲ ಮತ್ತು ಆಗುವುದಿಲ್ಲ ಎಂದಾಗ ಮಧ್ಯ ಪ್ರವೇಶ ಮಾಡಲು ನಿರ್ಧರಿಸಿದೆವು ಎಂದು ಯೆಸ್ ಬ್ಯಾಂಕಿನ ವಿತ್ ಡ್ರಾ ಮಿತಿ ಹೇರಿಗೆ ಬಗ್ಗೆ ತಿಳಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ ಯೆಸ್​ ಬ್ಯಾಂಕ್​ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿ, ವಿತ್ ಡ್ರಾ ಮಿತಿಯನ್ನು 50 ಸಾವಿರ ರೂ.ಗೆ ನಿಗದಿ ಮಾಡಿತ್ತು. ಇದರಿಂದಾಗಿ ಯಾವುದೇ ಸಾಲ ಅಥವಾ ಮುಂಗಡವನ್ನು ನೀಡಲು ಅಥವಾ ನವೀಕರಿಸಲು, ಯಾವುದೇ ಹೂಡಿಕೆ ಮಾಡಲು, ಯಾವುದೇ ಹೊಣೆಗಾರಿಕೆಯನ್ನು ಹೊಂದಲು ಅಥವಾ ಯಾವುದೇ ಪಾವತಿಯನ್ನು ವಿತರಿಸಲು ಯಸ್ ಬ್ಯಾಂಕ್‌ಗೆ ಸಾಧ್ಯವಾಗುವುದಿಲ್ಲ. ಮುಂದಿನ ತಿಂಗಳಿಗೆ, ಎಸ್‌ಬಿಐನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಆರ್‌ಬಿಐ ನೇಮಕ ಮಾಡಿದ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಯಸ್ ಬ್ಯಾಂಕಿನ ನೇತೃತ್ವ ವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel