ವಾಣಿಜ್ಯ

ಕೊರೋನಾ ಭೀತಿ; ಸೆನ್ಸೆಕ್ಸ್ 2919.26 ಅಂಕಗಳ ಕುಸಿತ: 11 ಲಕ್ಷ ಕೋಟಿ ನಷ್ಟ

Srinivas Rao BV

ಮುಂಬೈ: ಕೊರೋನಾ ವೈರಾಣು ಹರಡುವಿಕೆಯ ಭೀತಿ ಹಿನ್ನೆಲೆಯಲ್ಲಿ ಮುಂಬೈ ಷೇರು ಪೇಟೆ ಸೂಚ್ಯಂಕ ಗುರುವಾರ ಬರೋಬ್ಬರಿ 2919 ಅಂಕಗಳಷ್ಟು ಕುಸಿತ ಕಂಡು 32,778.14 ತಲುಪಿತ್ತು. 

ಕೊರೋನಾ ವೈರಸ್ ಅನ್ನು ಜಾಗತಿಕ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದು, ವಿದೇಶಿ ಪ್ರವಾಸಗಳ ರದ್ದತಿಯಂತಹ ಕ್ರಮಗಳು ಹಣಕಾಸು ಹಾಗೂ ಸರಕು ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಇದು ಷೇರು ಪೇಟೆಯಲ್ಲಿ ಕಳೆದ 33 ತಿಂಗಳಲ್ಲಿ ಅತಿ ಹೆಚ್ಚಿನ ಒಂದು ದಿನದ ಕುಸಿತವಾಗಿದ್ದು ಬರೊಬ್ಬರಿ 11 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. 

ರಾಷ್ಟ್ರೀಯ ಷೇರು ಮಾರುಕಟ್ಟೆ ಕೂಡ 868.25 ಅಂಕಗಳಷ್ಟು ಕುಸಿತ ಕಂಡು 9,590.15ರಷ್ಟಿತ್ತು. ಸೆನ್ಸೆಕ್ಸ್ ಕ್ರಮವಾಗಿ 36,021.51 ಮತ್ತು 35,261.92  ಅತಿ ಹೆಚ್ಚು ಕಡಿಮೆ ಅಂಕಗಳನ್ನು ದಾಖಲಿಸಿತು. ನಿಫ್ಟಿ ದಿನದಲ್ಲಿ ಅತಿ ಹೆಚ್ಚು 10,545.10 ಹಾಗೂ ಅತಿ ಕಡಿಮೆ 10,334 ಅಂಕಗಳನ್ನು ದಾಖಲಿಸಿತು.

SCROLL FOR NEXT