ವಾಣಿಜ್ಯ

ಯೆಸ್ ಬ್ಯಾಂಕಿನ ವಿತ್ ಡ್ರಾ ಮಿತಿ ಬರುವ ಬುಧವಾರಕ್ಕೆ ಕೊನೆ: ಪರಿಹಾರಕ್ಕೆ ಕೇಂದ್ರ ಸರ್ಕಾರ ಸೂಚನೆ 

Sumana Upadhyaya

ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕ್ ನ ಪುನಶ್ಚೇತನಕ್ಕೆ ಮೂರು ಕಚೇರಿ ಕಾರ್ಯನಿರ್ವಹಣೆ ದಿನಗಳೊಳಗೆ ಅಂದರೆ ಮುಂದಿನ ಬುಧವಾರ ಸಂಜೆಯೊಳಗೆ ಹಣದ ವಿತ್ ಡ್ರಾ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.


ಆರ್ಥಿಕ ಸಂಕಷ್ಟ ಮತ್ತು ಅದರ ವ್ಯವಸ್ಥಾಪಕರ ಮೇಲೆ ಕೇಳಿಬಂದ ಹಗರಣ ಆರೋಪ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ತಿಂಗಳ ಆರಂಭದಲ್ಲಿ ಯೆಸ್ ಬ್ಯಾಂಕ್ ನ ಚಟುವಟಿಕೆಗಳಿಗೆ ತಾತ್ಕಾಲಿಕ ನಿಷೇಧ ಹೇರಿತ್ತು. ಅದರಂತೆ ಬ್ಯಾಂಕಿನ ಹತೋಟಿ ಪಡೆದು ವಿತ್ ಡ್ರಾ ಮಿತಿಯನ್ನು ಏಪ್ರಿಲ್ 3ರವರೆಗೆ 50 ಸಾವಿರ ರೂಪಾಯಿಗಳಿಗೆ ನಿರ್ಬಂಧಿಸಿತ್ತು. 

ಇದೀಗ ಯೆಸ್ ಬ್ಯಾಂಕಿನ ಪುನಶ್ಚೇತನಕ್ಕೆ ಇನ್ನು ಮೂರು ದಿನಗಳಲ್ಲಿ ಸಹಜ ಸ್ಥಿತಿಗೆ ತರಲಾಗುವುದು ಎಂದು ಸರ್ಕಾರ ನಿನ್ನೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಆರ್ ಬಿಐ ಹಠಾತ್ತಾಗಿ .ಯೆಸ್ ಬ್ಯಾಂಕಿನಿಂದ ಹಣದ ವಿತ್ ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿರ್ಬಂಧಿಸಿದ್ದರಿಂದ ಹಲವರಿಗೆ ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಹಣ ಪಾವತಿ, ಎಟಿಎಂಗಳಿಂದ ಹಣ ಪಡೆಯಲು ಕಷ್ಟವಾಗುತ್ತಿದೆ.


ನಿನ್ನೆ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ರಿಸರ್ವ್ ಬ್ಯಾಂಕ್ ಪ್ರಸ್ತಾವನೆ ಸಲ್ಲಿಸಿದ ಪ್ರಕಾರ, ಯೆಸ್ ಬ್ಯಾಂಕಿನ ಪರಿಹಾರಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯೆಸ್ ಬ್ಯಾಂಕಿನಲ್ಲಿ ಶೇಕಡಾ 49ರವರೆಗೆ ಹೂಡಿಕೆ ಮಾಡಲಿದೆ. ಬೇರೆ ಹೂಡಿಕೆದಾರರನ್ನು ಕೂಡ ಆಹ್ವಾನಿಸಲಾಗಿದೆ ಎಂದರು. 

SCROLL FOR NEXT