ವಾಣಿಜ್ಯ

ಲಾಕ್‌ ಡೌನ್ ಅವಧಿಯಲ್ಲಿ ಬಿಎಸ್‌ಎನ್‌ಎಲ್‌ನಿಂದ ವಿಶೇಷ ಕೊಡುಗೆ, ಗ್ರಾಹಕರಿಗೆ ಬಂಪರ್!

Srinivasamurthy VN

ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್‌ಎಲ್‌) ತನ್ನ ಗ್ರಾಹಕರಿಗೆ, ಲಾಕ್‌ಡೌನ್ ಆದ ಮಾರ್ಚ್ 22 ರಿಂದ ಏಪ್ರಿಲ್ 20ರವರೆಗೆ ವ್ಯಾಲಿಡಿಟಿ ಅವಧಿ ಮೀರಿದ ಮತ್ತು ವ್ಯಾಲಿಡಿಟಿ ವಿಸ್ತರಣೆ ರೀಚಾರ್ಜ್ ಮಾಡಲು ಸಾಧ್ಯವಾಗದ ಎಲ್ಲಾ ಮೊಬೈಲ್ ಚಂದಾದಾರರಿಗೆ  ಉಚಿತವಾಗಿ ವ್ಯಾಲಿಡಿಟಿ ಅವಧಿಯನ್ನು ಸೋಮವಾರ ವಿಸ್ತರಿಸಿದೆ.

ಚಂದಾದಾರರು ವ್ಯಾಲಿಡಿಟಿಯ ಅವಧಿ ಮುಗಿದಿದ್ದರೂ ಒಳಬರುವ ಕರೆಗಳನ್ನು ಸ್ವೀಕರಿಸುತ್ತಲೇ ಇರುತ್ತಾರೆ ಎಂದು ಸರ್ಕಾರಿ ಟೆಲಿಕಾಂ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಜೊತೆಗೆ, ಲಾಕ್ ಡೌನ್ ಅವಧಿಯಲ್ಲಿ ಶೂನ್ಯ ಬ್ಯಾಲೆನ್ಸ್‌ ಆದ ಎಲ್ಲಾ ಚಂದಾದಾರರಿಗೆ ಬಿಎಸ್ಎನ್ಎಲ್ 10 ರೂ  ಉಚಿತ ಕರೆ ಸಮಯವನ್ನು ಸಹ ನೀಡುತ್ತಿದೆ. ಬಿಎಸ್ಎನ್ಎಲ್ ಮೊಬೈಲ್ ಚಂದಾದಾರರು ತುರ್ತು ಪರಿಸ್ಥಿತಿಯಲ್ಲಿ ಸಂವಹನ ನಡೆಸಲು ಈ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಬಿಎಸ್ಎನ್ಎಲ್ ಪ್ರಿಪೇಯ್ಡ್ ಬಳಕೆದಾರರ ಖಾತೆಗೆ 10 ರೂಪಾಯಿ ಇನ್ಸೆಂಟೀವ್ ನೀಡಲಿದೆ. ಅದು ಜೌಟ್  ಗೋಯಿಂಗ್ ಕರೆಗಳು ಮೂಲಕ ಮುಂದುವರೆಯಲಿದೆ ಎಂದು ಹೇಳಿದೆ.

ಮೂಲಗಳ ಪ್ರಕಾರ ಏಪ್ರಿಲ್ 20ರ ತನಕ ಬಿಎಸ್ಎನ್ಎಲ್ ಪ್ರಿಪೇಯ್ಡ್ ಗ್ರಾಹಕರ ಸಿಮ್ ಸೇವೆಗಳು ಕಡಿತಗೊಳ್ಳುವುದಿಲ್ಲ. ಇದರ ಜೊತೆಗೆ ಎಲ್ಲಾ  ಬಿಎಸ್ಎನ್ಎಲ್ ಪ್ರಿಪೇಯ್ಡ್ ಬಳಕೆದಾರರ ಖಾತೆಗೆ 10 ರೂಪಾಯಿ ಇನ್ಸೆಂಟೀವ್ ನೀಡಲಿದೆ. ಅದು ಜೌಟ್ ಗೋಯಿಂಗ್ ಕರೆಗಳು ಮೂಲಕ  ಮುಂದುವರೆಯಲಿದೆ ಎಂದು ಹೇಳಿದೆ. ಅದು ಜೌಟ್ ಗೋಯಿಂಗ್ ಕರೆಗಳು ಮೂಲಕ ಮುಂದುವರೆಯಲಿದೆ ಎಂದು ಹೇಳಿದೆ. ಬಿಎಸ್ಎನ್ಎಲ್ ತೆಗೆದುಕೊಂಡ ಈ ಕ್ರಮದಿಂದ ಬಡವರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ತಿಳಿಸಿದೆ.

ಬಿಎಸ್ಎನ್ಎಲ್ ತೆಗೆದುಕೊಂಡ ಈ ಕ್ರಮದಿಂದ ಬಡವರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಈ ಹಿಂದೆ ಟೆಲಿಕಾಂ ಪ್ರಾಧಿಕಾರ ಟ್ರಾಯ್ ಎಲ್ಲಾ ಟೆಲಿಕಾಂ ಕಂಪೆನಿಗಳ ಪ್ರಿಪೇಯ್ಡ್ ಬಳಕೆದಾರರ ಸಿಮ್ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವಂತೆ ಮತ್ತು ಜೊತೆಗೆ ಎಲ್ಲಾ  ಟೆಲಿಕಾಂ ಕಂಪೆನಿಗಳು ಲಾಕ್ ಡೌನ್ ಅವಧಿಯಲ್ಲಿ ಸರಿಯಾದ ಸೇವೆಯನ್ನು ಗ್ರಾಹಕರಿಗೆ ಒದಗಿಸಬೇಕೆಂದು ಹೇಳಿತ್ತು. ಅಂತೆಯೇ ಗ್ರಾಹಕರಿಗೆ ತೊಂದರೆ ಆದಲ್ಲಿ ಅದನ್ನು ಸರಿ ಪಡಿಸಬೇಕು ಎಂದು ಹೇಳಿತ್ತು.

ಹೊಸ ವರ್ಕ್ ಫ್ರಂ ಹೋಮ್ ಪ್ಲಾನ್
ಲಾಕ್​ ಡೌನ್​ ಆದ ಸಂದರ್ಭಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಹೊಸ ಲ್ಯಾಂಡ್​ಲೈನ್​ ಹೊಂದಿರುವ ಗ್ರಾಹಕರಿಗಾಗಿ ವರ್ಕ್ ಫ್ರಮ್ ಹೋಮ್ ಪ್ಲಾನ್ ಅನ್ನು ಪರಿಚಯಿಸಿತ್ತು. ಈ ಪ್ಲಾನ್ ಮೂಲಕ ಗ್ರಾಹಕರಿಗೆ ಒಂದು ತಿಂಗಳ ಕಾಲ ಉಚಿತ ಇಂಟರ್ನೆಟ್ ಸೇವೆಯನ್ನು ಒದಗಿಸುವುದಾಗಿ ತಿಳಿಸಿತ್ತು.  ಈ ಪ್ಲಾನ್ ಮೂಲಕ ಗ್ರಾಹಕರಿಗೆ ಒಂದು ತಿಂಗಳ ಕಾಲ ಉಚಿತ ಇಂಟರ್ನೆಟ್ ಸೇವೆಯನ್ನು ಒದಗಿಸುವುದಾಗಿ ತಿಳಿಸಿತ್ತು. ವರ್ಕ್ ಫ್ರಮ್ ಹೋಮ್ ಪ್ಲಾನ್ ಮೂಲಕ ಗ್ರಾಹಕರು ದಿನಕ್ಕೆ 10ಎಮ್​ಬಿಪಿಎಸ್ ವೇಗದಲ್ಲಿ 5ಜಿಬಿಯಂತೆ ಇಂಟರ್​ನೆಟ್ ಸೇವೆಯನ್ನು ಒದಿಸುತ್ತಿದೆ.

SCROLL FOR NEXT