ವಾಣಿಜ್ಯ

ಕೋವಿಡ್-19 ಸಂಕಷ್ಟ ಸಮಯದಲ್ಲಿ ಬ್ರಿಕ್ಸ್ ಬ್ಯಾಂಕಿನಿಂದ ಭಾರತಕ್ಕೆ 1 ಶತಕೋಟಿ ನೆರವು

Sumana Upadhyaya

ನವದೆಹಲಿ: ಬ್ರಿಕ್ಸ್ ರಾಷ್ಟ್ರಗಳ ನ್ಯೂ ಡೆವೆಲಪ್ ಮೆಂಟ್ ಬ್ಯಾಂಕ್ ಭಾರತ ದೇಶಕ್ಕೆ ಕೋವಿಡ್-19 ಸಂಕಷ್ಟ ಸಮಯದಲ್ಲಿ ತುರ್ತು ಸಹಾಯ ಸಾಲವಾಗಿ 1 ಶತಕೋಟಿ ಡಾಲರ್ ಆರ್ಥಿಕ ನೆರವು ನೀಡಿದೆ.

ಶಾಂಘೈ ಮೂಲದ ನ್ಯೂ ಡೆವೆಲಪ್ ಮೆಂಟ್ ಬ್ಯಾಂಕ್ ನ್ನು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಒಟ್ಟಾಗಿ 2014ರಲ್ಲಿ ಸ್ಥಾಪಿಸಿದ್ದವು. ಭಾರತದ ಹಿರಿಯ ಬ್ಯಾಂಕ್ ಅಧಿಕಾರಿ ಕೆ ವಿ ಕಾಮತ್ ಅದರ ಮುಖ್ಯಸ್ಥರು.

ಭಾರತಕ್ಕೆ ತುರ್ತು ನೆರವು ಕಾರ್ಯಕ್ರಮ ಸಾಲಕ್ಕೆ ಏಪ್ರಿಲ್ 30ರಂದು ಬ್ಯಾಂಕಿನ ನಿರ್ದೇಶಕರ ಮಂಡಳಿ ಒಪ್ಪಿಗೆ ನೀಡಿತ್ತು. ವಿಪತ್ತು ಸಮಯದಲ್ಲಿ ತನ್ನ ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡಲು ನ್ಯೂ ಡೆವೆಲಪ್ ಮೆಂಟ್ ಬ್ಯಾಂಕ್ ಬದ್ಧವಾಗಿದೆ. ಕೊರೋನಾ ವೈರಸ್ ನ ಈ ಸಮಯದಲ್ಲಿ ಭಾರತಕ್ಕೆ ಆರ್ಥಿಕ ಮತ್ತು ಸಾಮಾಜಿಕ ನೆರವು ನೀಡಲು ತುರ್ತು ಹಣಕಾಸು ನೆರವು ನೀಡುತ್ತಿದ್ದೇವೆ ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಉಪಾಧ್ಯಕ್ಷ ಕ್ಸಿಯಾನ್ ಝು ತಿಳಿಸಿದ್ದಾರೆ.

SCROLL FOR NEXT