ವಾಣಿಜ್ಯ

ಲಾಕ್‌ಡೌನ್ 4.0: ಮೇ 19ರಿಂದ ಬೆಂಗಳೂರು ಸೇರಿದಂತೆ ರಾಜ್ಯದ ನಾಲ್ಕು ನಗರಗಳಲ್ಲಿ ಓಲಾ ಸೇವೆ ಪುನಾರಂಭ

Raghavendra Adiga

ಬೆಂಗಳೂರು: ದೇಶಾದ್ಯಂತ ನಾಲ್ಕನೇ ಹಂತದ ಕೊರೋನಾ ಲಾಕ್‌ಡೌನ್‌ನ ಅಂಗವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಆಧಾರದ ಮೇಲೆ ಕ್ಯಾಬ್ ಸೇವಾ ಕಂಪನಿ  ಓಲಾ ತನ್ನ ಸೇವೆಗಳನ್ನು ಪುನಾರಂಭಿಸಲು ನಿರ್ಧರಿಸಿದ್ದು ಇದರ ಅಂಗವಾಗಿ ಮಂಗಳವಾರದಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕdದ ನಾಲ್ಕು  ನಗರಗಳಲ್ಲಿ ಕ್ಯಾಬ್ ಸಂಚಾರ ನಡೆಸಲಿದೆ.

ಈ ಸೇವೆಗಳನ್ನು ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿ "ಉನ್ನತ ಮಟ್ಟದ" ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಒದಗಿಸಲಾಗುತ್ತದೆ ಸಾರ್ವಜನಿಕರಿಗೆ ನಗರದೊಳಗಿನ ಪ್ರಯಾಣಕ್ಕಾಗಿ ಕ್ಯಾಬ್‌ಗಳು ಮತ್ತು ಆಟೋರಿಕ್ಷಾಗಳನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ ಎಂದು ಓಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊರೋನಾ ಕಾರಣದಿಂದ ಮಾರ್ಚಿನಲ್ಲಿ ಲಾಕ್ ಡೌನ್ ಪ್ರಾರಂಬವಾದಂದಿನಿಂದ ಬ್ ಸೇವೆಗಳನ್ನು ಸ್ಥಗಿತವಾಗಿತ್ತು.

ಚಾಲಕ-ಗ್ರಾಹಕರು ತಲಾ ಐದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಕಡ್ಡಾಯಗೊಳಿಸಿದ್ದು ಸಾಮಾಜಿಕ  ಅ<ತರ, ನೈರ್ಮಲ್ಯೀಕರಣ ಕ್ರಮಗಳು ಮತ್ತು ವೈಯಕ್ತಿಕ ನೈರ್ಮಲ್ಯ ಶಿಷ್ಟಾಚಾರಗಳನ್ನು ಎಲ್ಲಾ ಸಮಯದಲ್ಲೂ ಅಭ್ಯಾಸ ಮಾಡುವುದು ಕಡ್ಡಾಯ. ಕೊರೋನಾ ಲಾಕ್‌ಡೌನ್‌ನಿಂದಾಗಿ ಆದಾಯದ ಮೂಲವನ್ನು ಕಳೆದುಕೊಂಡಿರುವ ರಾಜ್ಯದ ಕ್ಯಾಬ್ ಮತ್ತು ಆಟೋರಿಕ್ಷಾ ಚಾಲಕರ ಕುಟುಂಬಗಳಿಗೆ  ಈ ಸೇವಾ ಪುನಾರಂಭವಾಗುತ್ತಿರುವುದು  ನೆಮ್ಮದಿ ನೀಡುತ್ತದೆ.

SCROLL FOR NEXT