ವಾಣಿಜ್ಯ

ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಂಕ್ ಮೇಲೆ ದಂಡ ಹಾಕಿದ ಆರ್ ಬಿಐ

Sumana Upadhyaya

ಮುಂಬೈ: ಬ್ಯಾಂಕ್ ಆಫ್ ಇಂಡಿಯಾ ಮೇಲೆ 5 ಕೋಟಿ ರೂಪಾಯಿ ವಿತ್ತೀಯ ದಂಡ ಹೇರಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

ಅನುತ್ಪಾದಕ ಸಂಪತ್ತು ಅಥವಾ ಆಸ್ತಿಗಳಲ್ಲಿನ ಖಾತೆಗಳ ಮುಂಗಡ-ಭಿನ್ನತೆಗೆ ಸಂಬಂಧಿಸಿದ ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ಒದಗಿಸುವಿಕೆ, ವಂಚನೆಗಳನ್ನು ಪತ್ತೆಹಚ್ಚಿ ತಿಳಿಸುವುದು ಮತ್ತು ವರ್ಗೀಕರಿಸುವುದು, ಗ್ರಾಹಕರ ಖಾತೆ ತೆರೆಯುವಿಕೆಯಲ್ಲಿ ಶಿಸ್ತಿನ ಪಾಲನೆಯಲ್ಲಿ ನ್ಯೂನತೆಗೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಪಾಲಿಸದಿರುವುದಕ್ಕೆ ಈ ದಂಡ ಹೇರಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಇದೇ ರೀತಿ ಆದೇಶ, ನಿಯಮವನ್ನು ಪಾಲಿಸದ ಕರ್ನಾಟಕ ಬ್ಯಾಂಕ್ ಮೇಲೆ ಸಹ ಆರ್ ಬಿಐ 1.20 ಕೋಟಿ ರೂಪಾಯಿ ದಂಡ ಹಾಕಿದೆ. ಸಾರಸ್ವತ್ ಸಹಕಾರಿ ಬ್ಯಾಂಕ್ ಗೆ 30 ಲಕ್ಷ ರೂಪಾಯಿ ದಂಡ ಹಾಕಲಾಗಿದೆ ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಪುಣೆ ಮೂಲದ ರೂಪಿ ಸಹಕಾರಿ ಬ್ಯಾಂಕಿಗೆ ಆಗಸ್ಟ್ 31ರವರೆಗೆ ವಿಶೇಷ ಆದೇಶವನ್ನು ಆರ್ ಬಿಐ ವಿಸ್ತರಿಸಿದೆ. ಹಣಕಾಸಿನಲ್ಲಿ ಕೊರತೆ ಕಂಡುಬಂದ ನಂತರ 2013ರಲ್ಲಿ ಆರ್ ಬಿಐ ಬ್ಯಾಂಕ್ ಗಳ ಮೇಲೆ ನಿರ್ಬಂಧ ಹಾಕಲಾರಂಭಿಸಿತ್ತು.

SCROLL FOR NEXT