ವಾಣಿಜ್ಯ

72,000 ಕೋಟಿ ದಾಟಿದ ದೀಪಾವಳಿ ಹಬ್ಬದ ವ್ಯಾಪಾರ-ವಹಿವಾಟು: ಚೀನಾ ಆದಾಯಕ್ಕೆ 'ಹೊಗೆ'!

Srinivas Rao BV

ನವದೆಹಲಿ: ದೀಪಾವಳಿ ಅಂಗವಾಗಿ ನಡೆಯುವ ವ್ಯಾಪಾರ-ವಹಿವಾಟುಗಳು 72,000 ಕೋಟಿಯನ್ನು ದಾಟಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ. 

ಚೀನಾ ಉತ್ಪನ್ನಗಳ ಬಹಿಷ್ಕಾರದ ನಡುವೆಯೂ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಈ ಮೊತ್ತದ ವ್ಯಾಪರ-ವಹಿವಾಟುಗಳು 72 ಸಾವಿರ ಕೋಟಿ ದಾಟಿದ್ದು, ಈ ದೀಪಾವಳಿ ಋತುವಿನಲ್ಲಿ ಚೀನಾ ರಫ್ತು ಮಾರುಕಟ್ಟೆಗೆ ಕನಿಷ್ಟ 40,000 ನಷ್ಟ ಉಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿರುವುದನ್ನು ಜಿ ನ್ಯೂಸ್ ವರದಿ ಮಾಡಿದೆ. 

ಭಾರತ-ಚೀನಾ ನಡುವಿನ ಗಡಿ ಘರ್ಷಣೆ ಹಿನ್ನೆಲೆಯಲ್ಲಿ ಸಿಎಐಟಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿತ್ತು. 

ಭಾರತದಲ್ಲಿ ವಿತರಣಾ ಕೇಂದ್ರಗಳು ಮುಂಚೂಣಿಯಲ್ಲಿರುವ ನಗರಗಳಲ್ಲಿ 72 ಸಾವಿರ ಕೋಟಿಗಿಂತಲೂ ಹೆಚ್ಚಿನ ವಹಿವಾಟು ನಡೆದಿದ್ದು. ಚೀನಾಗೆ 40,000 ಕೋಟಿ ರೂಪಾಯಿ ನಷ್ಟವಾಗಿರುವ ಸಾಧ್ಯತೆ ಇದೆ ಎಂದು ಸಿಎಐಟಿ ಹೇಳಿದೆ. 

ದೀಪಾವಳಿ ಹಬ್ಬದ ಋತುವಿನಲ್ಲಿ ಎಫ್ಎಂಸಿಜಿ ಸರಕುಗಳು ಹೆಚ್ಚು ಮಾರಾಟವಾಗುತ್ತವೆ. ಈ ದೀಪಾವಳಿಯಲ್ಲಿ ಉತ್ತಮ ಮಾರಾಟವಾಗಿರುವುದು ಭವಿಷ್ಯದ ಬಗ್ಗೆ ಆಶಾಕಿರಣ ಮೂಡಿಸುತ್ತದೆ ಎಂದು ಸಿಎಐಟಿ ಹೇಳಿದೆ.

SCROLL FOR NEXT