ವಾಣಿಜ್ಯ

ಈ ದೀಪಾವಳಿಯಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ ಶೇ.71 ರಷ್ಟು ಭಾರತೀಯರು!

Srinivas Rao BV

ನವದೆಹಲಿ: ಈ ದೀಪಾವಳಿಯ ಅವಧಿಯಲ್ಲಿ ಭಾರತೀಯರು ಚೀನಾ ಉತ್ಪನ್ನಗಳ ಬಹಿಷ್ಕಾರ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದಾರೆ. 

ದೀಪಾವಳಿ ವ್ಯಾಪಾರ-ವಹಿವಾಟಿನಲ್ಲಿ ಚೀನಾಗೆ ಈಗಾಗಲೇ 40,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಈಗಾಗಲೇ ಸಿಎಐಟಿ ಮೂಲಕ ತಿಳಿದುಬಂದಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಶೇ.71 ರಷ್ಟು ಭಾರತೀಯರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ್ದಾರೆ ಎಂದು ಸಿಎಐಟಿ ಮೂಲಕ ತಿಳಿದುಬಂದಿದೆ. 

ಲೋಕಲ್ ಸರ್ಕಲ್ಸ್ ನಡೆಸಿರುವ ಸಮೀಕ್ಷೆಯ ಪ್ರಕಾರ  ಶೇ.71 ರಷ್ಟು ಜನರು ಮೇಡ್ ಇನ್ ಚೀನಾ ಗುರುತನ್ನು ಹೊಂದಿರುವ ಸರಕುಗಳನ್ನು ಖರೀದಿಸಿಲ್ಲ. ಸಮೀಕ್ಷೆಯಲ್ಲಿ ಕಮ್ಯುನಿಟಿ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ 204 ಜಿಲ್ಲೆಗಳಲ್ಲಿ 14,000 ಭಾರತೀಯ ಗ್ರಾಹಕರನ್ನು ಸಮೀಕ್ಷೆಗೊಳಪಡಿಸಿದ್ದು, 

ಶೇ.29  ಗ್ರಾಹಕರು ಒಂದು ಅಥವಾ ಒಂದಕ್ಕಿಂತ ಹೆಚ್ಚು ಚೀನಾ ಉತ್ಪಾದಿತ ಉತ್ಪನ್ನಗಳನ್ನು ಖರೀದಿಸಿದ್ದಾರೆ.  ಈ ಪೈಕಿ ಶೇ.11 ರಷ್ಟು ಅದರ ಬಗ್ಗೆ ಮಾಹಿತಿ ಇಲ್ಲದೇ ಖರೀದಿಸಿದ್ದರೆ ಶೇ.16 ತಿಳಿದೂ ಸಹ ಚೀನಾ ಉತ್ಪನ್ನಗಳನ್ನು ಖರೀದಿಸಿದ್ದಾರೆ. 

SCROLL FOR NEXT