ರಘುರಾಮ್ ರಾಜನ್ 
ವಾಣಿಜ್ಯ

ಸರ್ಕಾರದ ಪ್ಯಾಕೇಜ್ ಗಳು ಪರಿಹಾರಗಳೇ ಹೊರತು ಪ್ರೋತ್ಸಾಹಕಗಳಲ್ಲ: ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್

ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಮಾಜದ ವಿವಿಧ ವರ್ಗದವರಿಗೆ ಕೇಂದ್ರ ಸರ್ಕಾರ ಹಲವು ಪ್ರೋತ್ಸಾಹಕ ಪ್ಯಾಕೇಜ್ ಗಳನ್ನು ಘೋಷಿಸಿರಬಹುದು. ಆದರೆ ಇವೆಲ್ಲಾ ಕೇವಲ ಪರಿಹಾರ ಕ್ರಮಗಳಷ್ಟೆ, ಪ್ರೋತ್ಸಾಹಕಗಳಲ್ಲ.

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಮಾಜದ ವಿವಿಧ ವರ್ಗದವರಿಗೆ ಕೇಂದ್ರ ಸರ್ಕಾರ ಹಲವು ಪ್ರೋತ್ಸಾಹಕ ಪ್ಯಾಕೇಜ್ ಗಳನ್ನು ಘೋಷಿಸಿರಬಹುದು. ಆದರೆ ಇವೆಲ್ಲಾ ಕೇವಲ ಪರಿಹಾರ ಕ್ರಮಗಳಷ್ಟೆ, ಪ್ರೋತ್ಸಾಹಕಗಳಲ್ಲ. ಈಗ ಸದ್ಯಕ್ಕೆ ಅದು ಮುಖ್ಯವೆಂದು ಅನಿಸಿದರೂ ಕೂಡ ಪ್ರೋತ್ಸಾಹಕಗಳು ಬರಲು ಇನ್ನೂ ಸಮಯ ಹಿಡಿಯಬಹುದು. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಮತ್ತು ರಾಜಕೀಯ ಆರ್ಥಿಕ ವಿಶ್ಲೇಷಕ ಶಂಕರ್ ಅಯ್ಯರ್ ಅವರ ಜೊತೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ಸರ್ಕಾರದ ಪ್ರೋತ್ಸಾಹಕ ಕ್ರಮಗಳು ಸಾಕಷ್ಟು ಉತ್ತಮವಾಗಿವೆ ಎಂದು ನಿಮಗನ್ನಿಸುತ್ತಿದೆಯೇ?
-ಆರ್ಥಿಕತೆ ತೀವ್ರ ಹದಗೆಟ್ಟ ಸಂದರ್ಭದಲ್ಲಿ ಸಾಂಕ್ರಾಮಿಕ ಕಾಣಿಸಿಕೊಂಡಿತು. ಆಗಷ್ಟೇ ನೂತನ ಬಜೆಟ್ ಘೋಷಣೆಯಾದ ಸಮಯ. ಹಿಂದಿನ ಆರ್ಥಿಕ ವರ್ಷದ ಬಜೆಟ್ ಮುಗಿಯುತ್ತಾ ಬಂದಿತ್ತು,ಕೇಂದ್ರ ಸರ್ಕಾರದ ಬಳಿ ಹೆಚ್ಚು ಹಣ ಖರ್ಚು ಮಾಡಲು ಇರಲಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಖರ್ಚುವೆಚ್ಚ ಎರಡು ರೀತಿಯಲ್ಲಿತ್ತು. 

ಒಂದು ಗೃಹಿಣಿಯರಿಗೆ ಮನೆ ವಸ್ತುಗಳಿಗೆ ಕ್ಲಿಷ್ಟ ಸಮಯದಲ್ಲಿ ಬದುಕಲು ಸಹಾಯ ಮಾಡುವುದು, ಮತ್ತೊಂದು ಸಣ್ಣ, ಮಧ್ಯಮ ಮತ್ತು ಅತಿಸಣ್ಣ ಕೈಗಾರಿಕೆಗಳ ರಕ್ಷಣೆ. ಇವುಗಳನ್ನು ನಾನು ಪರಿಹಾರಗಳು ಎನ್ನುತ್ತೇನೆಯೇ ಹೊರತು, ಪ್ರೋತ್ಸಾಹಕಗಳಲ್ಲ. ಆರ್ಥಿಕತೆ ಬಲಿಷ್ಠವಾದಾಗ ಪ್ರೋತ್ಸಾಹಕಗಳು ಬರುತ್ತವೆ. 

ನೀವ್ಯಾಕೆ ಇದನ್ನು ಪರಿಹಾರ ಎನ್ನುತ್ತೀರಿ, ಪ್ರೋತ್ಸಾಹಕ ಎನ್ನುವುದಿಲ್ಲ?
ಪ್ರೋತ್ಸಾಹಕಗಳ ಬಗ್ಗೆ ಮಾತನಾಡುವಾಗ ಬೇಡಿಕೆ ದುರ್ಬಲವಾಗಿದೆ ಎನ್ನುತ್ತೇವೆ, ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಉತ್ಪಾದನೆ ಸಾಮರ್ಥ್ಯ ಕುಸಿದಿದೆ. ಸಣ್ಣ, ಅತಿ ಸಣ್ಣ ಕೈಗಾರಿಕೆಗಳು ಮುಚ್ಚಿದಾಗ, ಉದ್ಯೋಗ ಹೋದಾಗ, ದೇಶದಲ್ಲಿ ಉತ್ಪಾದನೆ ಕಡಿಮೆಯಾಗುತ್ತದೆ. ಪರಿಹಾರ ಇವುಗಳೆಲ್ಲವನ್ನು ತಡೆಯಲು ಇರುವ ಪ್ರಯತ್ನ, ಬೇಡಿಕೆ ಮತ್ತೆ ಸೃಷ್ಟಿಯಾದಾಗ ಪೂರೈಕೆ ಅವುಗಳನ್ನು ಪೂರೈಸಲು ಕಾಯುತ್ತಿರುತ್ತದೆ.

ದುರ್ಬಲ ಬೇಡಿಕೆಯ ಪರಿಸ್ಥಿತಿಯಲ್ಲಿ, ನೀವು ಹೆಚ್ಚಿನ ಹಣದುಬ್ಬರವನ್ನು ನೋಡುವುದಿಲ್ಲ. ಈಗ, ಭಾರತದಲ್ಲಿ ನಾವು ಹೆಚ್ಚಿನ ಹಣದುಬ್ಬರವನ್ನು ನೋಡುತ್ತಿದ್ದೇವೆ, ಅದರಲ್ಲಿ ಕೆಲವು ನಿಸ್ಸಂದೇಹವಾಗಿ ಆಹಾರ, ಆದರೆ ಅವುಗಳಲ್ಲಿ ಕೆಲವು ಸರಬರಾಜು ಸರಪಳಿಗಳು ಬಹಳ ಕಷ್ಟದಲ್ಲಿರುವುದರಿಂದ. ಕೆಲವು ಘಟಕಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ ಇದರ ಪರಿಣಾಮವಾಗಿ, ದುರ್ಬಲ ಬೇಡಿಕೆಯ ಹೊರತಾಗಿಯೂ ಬೆಲೆಗಳು ಏರುತ್ತಿವೆ. ಅದು ಪೂರೈಕೆಯ ಸಮಸ್ಯೆಯನ್ನು ತೋರಿಸುತ್ತದೆ.

ಬೇಡಿಕೆಯನ್ನು ಭರಿಸಲು ಶಕ್ತ್ಯರಾಗಿದ್ದೇವೆಯೇ?
ಈ ಸಮಸ್ಯೆಯಿಂದ ಹೊರಬರುವವರೆಗೂ ಬೇಡಿಕೆ ದುರ್ಬಲವಾಗಿರುತ್ತದೆ, ಆ ಸಮಯದಲ್ಲಿ ನಿಮಗೆ ಸ್ವಲ್ಪ ಉತ್ತೇಜನ ಬೇಕಾಗಬಹುದು. ಆಗಾಗ್ಗೆ, ಇದು ಸಮಾಜದ ವಿಶಾಲ ವಿಭಾಗದ ಬೇಡಿಕೆಯನ್ನು ಹೆಚ್ಚಿಸುವ ರೂಪವನ್ನು ಪಡೆಯುತ್ತದೆ. ಭಾರತದಲ್ಲಿ, ಇದು ಮೂಲಸೌಕರ್ಯವಾಗಿದೆ-ಏಕೆಂದರೆ ಉಕ್ಕು, ಅಲ್ಯೂಮಿನಿಯಂ, ಸಿಮೆಂಟ್ ಇತ್ಯಾದಿಗಳ ಬೇಡಿಕೆಯನ್ನು ಹೆಚ್ಚಿಸುತ್ತೀರಿ, ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ನಾವು ವೈರಸ್ ತೊಡೆದುಹಾಕಲು ನಮಗೆ ಅಗತ್ಯವಿರುವ ಮೂಲಸೌಕರ್ಯ ವೆಚ್ಚದಲ್ಲಿ ಭಾರಿ ವಿಸ್ತರಣೆಗೆ ನಾವು ಈಗ ತಯಾರಿ ನಡೆಸಬೇಕು. 

ಸರ್ಕಾರದ ಇತ್ತೀಚಿನ ಕ್ರಮಗಳು ಬೆಳವಣಿಗೆಗೆ ಪೂರಕವಾಗಿದೆಯೇ?
ಇಲ್ಲ, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. 

ನಮ್ಮ ಹಣಕಾಸು ನಿರ್ವಹಣೆ ಭಯಾನಕವಾಗಿದೆ ಎಂದಿದ್ದಿರಿ, ಯಾಕೆ? 
ನಮ್ಮಲ್ಲಿ ಎಫ್‌ಆರ್‌ಬಿಎಂ ಕಾಯ್ದೆ ಇದ್ದು ಅದು ಕೊರತೆಯನ್ನು ತಗ್ಗಿಸಲು ಹೇಳುತ್ತದೆ. ಆದರೆ ಕಾಲಾನಂತರದಲ್ಲಿ ನಾವು ಮಾಡುತ್ತಿರುವುದು (ನಿಜವಾದ) ಕೊರತೆ ಹೆಚ್ಚಾಗಿದ್ದರೂ ನಿಗದಿತ ಸಂಖ್ಯೆಯನ್ನು ಪೂರೈಸುವ ಮಾರ್ಗಗಳನ್ನು ನಾವು ಕಂಡುಕೊಳ್ಳುತ್ತೇವೆ.ಸಾಕಷ್ಟು ಆದಾಯವನ್ನು ಹೊಂದಲು ನೋಡುತ್ತಿದ್ದೇವೆ, 

ಆದರೆ ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕ ವಲಯಗಳಲ್ಲಿ ಆದಾಯ ಪಡೆಯುವಿಕೆ ಕಡಿಮೆಯಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಪ್ತ ಗುಂಪಿನಿಂದ ಸ್ಪೋಟಕ ಸಂದೇಶ, ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

SCROLL FOR NEXT