ವಾಣಿಜ್ಯ

ಸತತ ಎರಡನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ

Manjula VN

ನವದೆಹಲಿ: ದೇಶದ ಪ್ರಮುಖ ತೈಲ ಕಂಪನಿಗಳು ಶುಕ್ರವಾರ ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿವೆ.

ಡೀಸೆಲ್ ಬೆಲೆಯನ್ನು ಪ್ರತಿಲೀಟರ್ ಗೆ , 22 ಪೈಸೆಯಿಂದ ರಿಂದ 26 ಪೈಸೆಗೂ ಹಾಗೂ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 17 ರಿಂದ 19 ಪೈಸೆಗೆ ಹೆಚ್ಚಿಸಲಾಗಿದೆ.

48 ದಿನಗಳವರೆಗೆ ಸ್ಥಿರವಾಗಿದ್ದ ಎರಡೂ ಇಂಧನಗಳ ಬೆಲೆ ನವೆಂಬರ್ 20 ಮೊದಲ ಬಾರಿಗೆ ಹೆಚ್ಚಳವಾಗಿದೆ. ಪರಿಣಾಮ ದೆಹಲಿಯಲ್ಲಿ, ಪೆಟ್ರೋಲ್ 19 ಪೈಸೆ ಮತ್ತು ಡೀಸೆಲ್ ಅನ್ನು ಪ್ರತಿ ಲೀಟರ್ ಗೆ 24 ಪೈಸೆಗಳಷ್ಟು ದುಬಾರಿಯಾಗಿದೆ. ಇಂದು ಕ್ರಮವಾಗಿ 81.89 ಮತ್ತು 71.86 ರೂ.ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ ಲೀಟರ್‌ಗೆ 88.58 ರೂ., ಡೀಸೆಲ್ ಲೀಟರ್‌ಗೆ 78.38 ರೂಗೆ ತಲುಪಿದೆ. 

SCROLL FOR NEXT