ವಾಣಿಜ್ಯ

ಬಿಪಿಸಿಎಲ್‌ ಖಾಸಗೀಕರಣದ ನಂತರವೂ ಎಲ್ ಪಿಜಿ ಸಬ್ಸಿಡಿ ಮುಂದುವರಿಕೆ: ಧರ್ಮೇಂದ್ರ ಪ್ರಧಾನ್

Lingaraj Badiger

ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಇಂಧನ ಕಂಪನಿ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್‌) ಖಾಸಗೀಕರಣದ ನಂತರವೂ, ಗ್ರಾಹಕರಿಗೆ ಎಲ್ ಪಿಜಿ ಮೇಲಿನ ಸಬ್ಸಿಡಿ ಮುಂದುವರೆಯಲಿದೆ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ಹೇಳಿದ್ದಾರೆ.

‘ಅಡುಗೆ ಅನಿಲ ಸಿಲಿಂಡರ್‌ಗೆ ಸಂಬಂಧಿಸಿದ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತಗೆ ವರ್ಗಾವಣೆ ಆಗುತ್ತದೆಯೇ ವಿನಾ ಅದು ಯಾವುದೇ ಕಂಪನಿಗೆ ಸಿಗುವುದಿಲ್ಲ. ಹಾಗಾಗಿ, ಕಂಪನಿಯ ಮಾಲೀಕತ್ವ ಯಾರ ಕೈಯಲ್ಲಿ ಇರುತ್ತದೆ ಎಂಬುದಕ್ಕೆ  ಮಹತ್ವ ನೀಡುವ ಅಗತ್ಯ ಇಲ್ಲ’ ಎಂದು ಪ್ರಧಾನ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಬಿಪಿಸಿಎಲ್‌ ಅನ್ನು ಖಾಸಗೀಕರಣಗೊಳಿಸುತ್ತಿದ್ದು, ಕಂಪನಿಯಲ್ಲಿ ಸರ್ಕಾರ ಹೊಂದಿರುವ ಶೇಕಡ 53ರಷ್ಟು ಷೇರುಗಳನ್ನು ಮಾರಾಟ ಮಾಡುತ್ತಿದೆ.

ಪ್ರಸ್ತುತ ಸರ್ಕಾರ ಒಂದು ವರ್ಷದಲ್ಲಿ 14.2-ಕೆಜಿ ತೂಕದ 12 ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ಗ್ರಾಹಕರಿಗೆ ನೀಡುತ್ತಿದೆ. ಈ ಸಬ್ಸಿಡಿಯನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುತ್ತಿದೆ.

SCROLL FOR NEXT