ವಾಣಿಜ್ಯ

ಸೀತಾರಾಮನ್ ಗೆ ಸಿಎಐಟಿ ಪತ್ರ: ಅಮೇಜಾನ್-ಫ್ಲಿಪ್ ಕಾರ್ಟ್ ಫೆಸ್ಟೀವ್ ಸೇಲ್ ನಿಷೇಧಕ್ಕೆ ಆಗ್ರಹ

Srinivas Rao BV

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ (ಸಿಎಐಟಿ) ಪತ್ರ ಬರೆದಿದ್ದು, ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ಗಳಲ್ಲಿ ಸೀಸನಲ್ ಫೆಸ್ಟೀವ್ ಸೇಲ್ಸ್ ನ್ನು ನಿಷೇಧಿಸುವಂತೆ ಮನವಿ ಮಾಡಿದೆ. 

ಒಂದೋ ಫೆಸ್ಟೀವ್ ಸೇಲ್ಸ್ ನ್ನು ನಿಷೇಧಿಸಿ ಇಲ್ಲವೇ ಈ ಅವಧಿಯಲ್ಲಿ ಜಿಎಸ್ ಟೀ ಹಾಗೂ ಆದಯ ತೆರಿಗೆ ತಪ್ಪಿಸುವುದರ ಮೇಲೆ ನಿಗಾ ವಹಿಸಲು ವಿಶೇಷ ಕಾರ್ಯಪಡೆಯನ್ನು ನಿಯೋಜಿಸಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಅ.16-21 ವರೆಗೆ ನವರಾತ್ರಿ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ಫೆಸ್ಟಿವಲ್ ಸೇಲ್ ನ್ನು ನಡೆಸಲು ಮುಂದಾಗಿದೆ. ಅಮೇಜಾನ್ ನಲ್ಲಿ ಅ.17 ರಿಂದ ಸೇಲ್ ನಡೆಯಲಿದ್ದು, ಈ 5-6 ದಿನಗಳ ಅವಧಿಯಲ್ಲಿ ಅಮೇಜಾನ್-ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸುವ ವಸ್ತುಗಳ ಮೇಲೆ ಶೇ.80 ರಷ್ಟು ರಿಯಾಯಿತಿ ದೊರೆಯಲಿದೆ.

ವಾಸ್ತವಿಕ ಬೆಲೆಗಳಿಗಿಂತಲೂ ಶೇ.10-80 ರಷ್ಟು ರಿಯಾಯಿತಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವುದರ ಹಿಂದೆ ಜಿಎಸ್ ಟಿ ಕದಿಯುವ ನಡೆಯಾಗಿದೆ. ಈ ರೀತಿ ಮಾಡುವುದರಿಂದ ಸರ್ಕಾರಕ್ಕೆ ಬರುವ ಜಿಎಸ್ ಟಿ ಆದಾಯಕ್ಕೆ ತೀರವಾಗಿ ಹೊಡೆತ ಬೀಳಲಿದೆ ಎಂದು ಸಿಎಐಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀನ್ ಖಂಡೇಲ್ವಾಲ್ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಅಮೇಜಾನ್-ಫ್ಲಿಪ್ ಕಾರ್ಟ್ ನಂತಹ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆಗಳು ಫೆಸ್ಟೀವ್ ಸೀಸನ್ ನಲ್ಲಿ 19,000 ಕೋಟಿ ರೂ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿ ಶೇ.30 ರಷ್ಟು ಬೆಳವಣಿಗೆ ದಾಖಲಿಸಿದ್ದವು.

SCROLL FOR NEXT