ವಾಣಿಜ್ಯ

ಪಿಎನ್‌ಬಿ ಹಗರಣ: ಯುಕೆ ನ್ಯಾಯಾಲಯದಲ್ಲಿ ನೀರವ್ ಮೋದಿ ಜಾಮೀನು ಅರ್ಜಿ ವಜಾ

Raghavendra Adiga

ಲಂಡನ್: ಪರಾರಿಯಾಗಿರುವ ವಜ್ರದ ವ್ಯಾಪಾರಿ  ನೀರವ್ ಮೋದಿಗೆ ಯುಕೆ ನ್ಯಾಯಾಲಯದಲ್ಲಿ ದೊಡ್ಡ ಹಿನ್ನೆಡೆಯಾಗಿದೆ. ಯುಕೆ ನ್ಯಾಯಾಲಯ ಸೋಮವಾರ ಮೋದಿಯ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ತಿರಸ್ಕರಿಸಿದೆ.

ಈ ತಿಂಗಳ ಆರಂಭದಲ್ಲಿ, ಯುಕೆ ನ್ಯಾಯಾಲಯವು ಪ್ರಸ್ತುತ ನಡೆಯುತ್ತಿರುವ ಹಸ್ತಾಂತರ ಸಂಬಂಧ ವಿಚಾರಣೆಯಲ್ಲಿ ಮುಂದಿನ ನಿಗದಿತ ವಿಚಾರಣೆಯವರೆಗೆ ನೀರವ್ ಮೋದಿಯ  ರಿಮಾಂಡ್ ಅನ್ನು ವಿಸ್ತರಿಸಿ ಆದೇಶಿಸಿತ್ತು.

ಕಳೆದ ತಿಂಗಳು, ಮೋದಿ ಕಾನೂನು ಸಲಹೆಗಾರ ಯುಕೆ ನ್ಯಾಯಾಲಯಕ್ಕೆ ತಿಳಿಸಿದಂತೆ  ನೀರವ್ ಮೋದಿ ಭಾರತದಲ್ಲಿ ನ್ಯಾಯಯುತ ವಿಚಾರಣೆಯನ್ನು ಎದುರಿಸುವ ಸಾಧ್ಯತೆ ಇಲ್ಲ ಅವರ ಪ್ರಕರಣದ ರಾಜಕೀಯ ಸ್ವರೂಪ ಪಡೆಯಬಹುದು, ಮತ್ತು ಭಾರತೀಯ ಕಾರಾಗೃಹಗಳಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯಗಳ ಕೊರತೆ ಇದ್ದು  ಅವರು "ಆತ್ಮಹತ್ಯೆಯ ಅಪಾಯ" ವನ್ನು ಎದುರಿಸುತ್ತಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿಅಂದಾಜು 2 ಬಿಲಿಯನ್ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪದ ಮೇಲೆ 49 ವರ್ಷದ ವಜ್ರದ ವ್ಯಾಪಾರಿ  ಭಾರತಕ್ಕೆ ಬೇಕಾಗಿರುವವನಾಗಿದ್ದಾರೆ. 
 

SCROLL FOR NEXT