ವಾಣಿಜ್ಯ

2035 ರ ವೇಳೆಗೆ ವಿಶ್ವದ ಮೊದಲ ಹೈಡ್ರೋಜನ್ ಶಕ್ತ ವಿಮಾನ ಪರಿಚಯಿಸುವುದು ಏರ್ ಬಸ್ ಗುರಿ

Nagaraja AB

ನವದೆಹಲಿ: 2035ರ ವೇಳೆಗೆ ಮಾಲಿನ್ಯ ರಹಿತ ವಿಶ್ವದ ಮೊದಲ ವಾಣಿಜ್ಯಾತ್ಮಕ ವಿಮಾನದ ಮೂರು ಪರಿಕಲ್ಪನೆಗಳನ್ನು ವಿಮಾನಯಾನ ದೈತ್ಯ ಕಂಪನಿ ಏರ್ ಬಸ್ ಸೋಮವಾರ ಬಹಿರಂಗಪಡಿಸಿದೆ.

ಈ ಎಲ್ಲಾ ಪರಿಕಲ್ಪನೆಗಳು ಜಲಜನಕದಿಂದ ನಡೆಸಲ್ಪಡುತ್ತವೆ. ಇದು ಏರೋಸ್ಪೇಸ್ ಮತ್ತು ಇತರ ಅನೇಕ ಕೈಗಾರಿಕೆಗಳಿಗೆ ಶುದ್ಧ ವಾಯುಯಾನ ಇಂಧನವಾಗಿ ಪರಿಹಾರವಾಗುವ ಸಾಧ್ಯತೆಯಿರುವುದಾಗಿ ಯುರೋಪಿಯನ್ ಸಂಸ್ಥೆಯು ವಿಶ್ವಾಸ ಹೊಂದಿದೆ.

ಇದು ಒಟ್ಟಾರೆಯಾಗಿ ವಾಣಿಜ್ಯ ವಾಯುಯಾನ ಕ್ಷೇತ್ರಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ ಮತ್ತು ಈ ಉದ್ಯಮವು ಹಿಂದೆಂದೂ ಕಾಣದ ಪ್ರಮುಖ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಲು ನಾವು ಉದ್ದೇಶಿಸಿದ್ದೇವೆ. ಇಂದು  ಬಹಿರಂಗಪಡಿಸಿರುವ ಪರಿಕಲ್ಪನೆಗಳು ವಾಯುಮಾಲಿನ್ಯವಿಲ್ಲದೆ ವಿಮಾನ ಹಾರಾಟ ನಡೆಸುವ ಮಹತ್ವಾಕಾಂಕ್ಷೆಯ ನೋಟವನ್ನು ಜಗತ್ತಿಗೆ ನೀಡುತ್ತವೆ ಎಂದು ಏರ್‌ಬಸ್ ಸಿಇಒ ಗುಯಿಲೌಮ್ ಫೌರಿ ಹೇಳಿದ್ದಾರೆ.

ಜಲಜನಕದ ಬಳಕೆಯು - ಸಂಶ್ಲೇಷಿತ ಇಂಧನಗಳಲ್ಲಿ ಮತ್ತು ವಾಣಿಜ್ಯಾತ್ಮಕ ವಿಮಾನಗಳ ಪ್ರಾಥಮಿಕ ವಿದ್ಯುತ್ ಮೂಲವಾಗಿ ವಾಯುಯಾನದ ಹವಾಮಾನ ಪರಿಣಾಮವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಲವಾಗಿ ನಂಬಿರುವುದಾಗಿ ಅವರು ತಿಳಿಸಿದ್ದಾರೆ.

SCROLL FOR NEXT