ಸಂಗ್ರಹ ಚಿತ್ರ 
ವಾಣಿಜ್ಯ

ಹೆಚ್ಚುತ್ತಿರುವ ಕೋವಿಡ್-19 ಪ್ರಕರಣದಿಂದ, ಫೋನ್ ಪೇ ಕೊರೋನಾ ವಿಮೆ ಬೇಡಿಕೆಯಲ್ಲಿ ಏರಿಕೆ

ದೇಶಾದ್ಯಂತ ಕೋವಿಡ್‌-19 ಪ್ರಕರಣಗಳು ಹೆಚ್ಚಾಗುತ್ತಿರುವಾಗ, ಭಾರತದ ಪ್ರಮುಖ ಡಿಜಿಟಲ್‌ ಪಾವತಿ ಪ್ಲಾಟ್ಫಾರ್ಮ್‌ ಫೋನ್ ಪೇ, ಕಳೆದ ವರ್ಷ ಪ್ರಾರಂಭಿಸಲಾದ ತನ್ನ ಕೊರೋನಾ ವೈರಸ್‌ ವಿಮೆಯ ಅಳವಡಿಕೆಯನ್ನು ಹಂಚಿಕೊಂಡಿದೆ.

ನವದೆಹಲಿ: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಾಗ, ಭಾರತದ ಪ್ರಮುಖ ಡಿಜಿಟಲ್‌ ಪಾವತಿ ಪ್ಲಾಟ್ಫಾರ್ಮ್‌ ಫೋನ್ ಪೇ, ಕಳೆದ ವರ್ಷ ಪ್ರಾರಂಭಿಸಲಾದ ತನ್ನ ಕೊರೋನಾ ವೈರಸ್‌ ವಿಮೆಯ ಅಳವಡಿಕೆಯನ್ನು ಹಂಚಿಕೊಂಡಿದೆ.

ಮಾರಾಟ ಮತ್ತು ಹಕ್ಕುಗಳ ದತ್ತಾಂಶ ಶ್ರೇಣಿಯ ಪ್ರಕಾರ ಕಳೆದ ವರ್ಷದಲ್ಲಿ ಟೈರ್-‌1 ನಗರದ ಹೊರಗಿನ ಪಟ್ಟಣಗಳಲ್ಲಿಯೇ ಶೇ.75 ರಷ್ಟು ವಿಮೆಯನ್ನು ಗ್ರಾಹಕರು ಖರೀದಿಸಿದ್ದಾರೆ ಎನ್ನಲಾಗಿದೆ. ಇದು ದೇಶದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಬಳಕೆದಾರರಲ್ಲಿ ಫೋನ್ ಪೇ ಮೇಲಿನ ನಂಬಿಕೆಯನ್ನು ತೋರಿಸುತ್ತದೆ. ಮಾರಾಟಕ್ಕೆ ಅತ್ಯಂತ ಹೆಚ್ಚು ಕೊಡುಗೆ ನೀಡಿರುವ ರಾಜ್ಯಗಳೆಂದರೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತೇಲಂಗಾಣ ಮತ್ತು ಗುಜರಾತ್‌ ಸೇರಿವೆ. ಮಾರ್ಚ್‌ 2021 ರಲ್ಲಿ ಕೊರೋನಾ ವಿಮೆ ಮಾರಾಟದಲ್ಲಿ(ರಾಷ್ಟ್ರಮಟ್ಟದಲ್ಲಿ ಪ್ರಕರಣ ಹೆಚ್ಚಾದಾಗ) ಐದು ಪಟ್ಟು ಹೆಚ್ಚಾಗಿದೆ.

ಅತಿ ಹೆಚ್ಚು ವಿಮೆಯನ್ನು ಕ್ಲೈಮ್‌ ಮಾಡಿದ ರಾಜ್ಯಗಳೆಂದರೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತೇಲಂಗಾಣ ಮತ್ತು ಗುಜರಾತ್‌ ರಾಜ್ಯಗಳಾಗಿವೆ. ಗ್ರಾಹಕರಿಗೆ 3.5 ಕೋಟಿ ಕ್ಲೈಮ್‌ ಗಳನ್ನು ಈಗಾಗಲೇ ನೀಡಲಾಗಿದ್ದು, ಶೇ.75 ರಷ್ಟು ವಿಮೆ ಕ್ಲೈಮ್‌ ಗಳನ್ನು ಪಡೆದಿರುವುದು ಸಣ್ಣ ಪಟ್ಟಣ ಮತ್ತು ಗ್ರಾಮಗಳಿಂದ ಎಂಬುದು ವಿಶೇಷ.

ಫೋನ್ ಪೇ‌ ಬಜಾಜ್‌ ಅಲಿಯಾನ್ಸ್‌ ಜನರಲ್‌ ಇನ್ಯೂರೆನ್ಸ್‌ ಸಹಯೋಗದೊಂದಿಗೆ ಇಂದು ಮಾರುಕಟ್ಟೆಯಲ್ಲಿ ಉತ್ತಮವಾದ ಕೊರೋನಾ ವೈರಸ್‌ ವಿಮೆಯನ್ನು ನೀಡುತ್ತಿದೆ. ವಾರ್ಷಿಕ ಪ್ರೀಮಿಯಂ 50,000. ಗಳ ಕವರಿಗೆ ಬರೀ 396 ರೂ.ಮಾತ್ರ ಹಾಗೂ ಗ್ರಾಹಕರು ಕೇವಲ 541 ರೂ. ಕೈಗೆಟಕುವ ಬೆಲೆಯಲ್ಲಿ 1,00,000 ರೂ. ಪ್ರೀಮಿಯಂ ಕವರ್‌ ಕೂಡಾ ಆಯ್ಕೆ ಮಾಡಿಕೊಳ್ಳಬಹುದು. ಕೋವಿಡ್‌-19 ಚಿಕಿತ್ಸೆ ನೀಡುವ ಯಾವುದೇ ಆಸ್ಪತ್ರೆಯಲ್ಲಿ ಕವರ್‌ ಅನ್ವಯವಾಗುತ್ತದೆ. ಅಲ್ಲದೇ ಆಸ್ಪತ್ರೆಯ ಪೂರ್ವಭಾವಿ ವೆಚ್ಚಗಳು ಮತ್ತು ಆರೈಕೆಯ ನಂತರದ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ 30  ದಿನಗಳ ವೆಚ್ಚವನ್ನೂ ಇದು ಒಳಗೊಂಡಿದೆ.

ಫೋನ್ ಪೇ ವಿ.ಪಿ ಮತ್ತು ವಿಮಾ ಮುಖ್ಯಸ್ಥರಾದ ಗುಂಜಯ್‌ ಘಾಯ್‌ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ದೇಶಾದ್ಯಂತ ಕೋವಿಡ್‌- 19  ಏಕಾಏಕಿ ಏರಿಕೆ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಅನೇಕ ಭಾರತೀಯರು ಇನ್ನೂ ಆರೋಗ್ಯ ವಿಮೆಯನ್ನು ಹೊಂದಿಲ್ಲ. ಇದರ ಪರಿಣಾಮವಾಗಿ ಕುಟುಂಬದಲ್ಲಿ ಯಾರೇ ಒಬ್ಬರಿಗೆ ಆಸ್ಪತ್ರೆಗೆ ಸೇರಿಸಬೇಕಾದ ಪರಿಸ್ಥಿತಿ ಎದುರಾದರೂ, ಹೆಚ್ಚುವರಿ ಆರ್ಥಿಕ ಹೊರೆ ಹೊರಬೇಕಾಗುತ್ತದೆ. ಕೋವಿಡ್‌ -19 ಗಮನದಲ್ಲಿಟ್ಟುಕೊಂಡು ನಾವು ನಮ್ಮ 247 ದಶಲಕ್ಷ ನೋಂದಾಯಿತ ಬಳಕೆದಾರರಿಗೆ ಕೊರೋನಾ ವೈರಸ್‌ ವಿಮೆಯ ಆಫರ್‌ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಆ್ಯಪ್‌ ನಲ್ಲಿ ಆರೋಗ್ಯ ವಿಮೆ ವಿಭಾಗಕ್ಕೆ ಹೋಗಿ ಗ್ರಾಹಕರು ವಿಮೆ ಖರೀದಿಸಬಹುದು. ಖರೀದಿಸುವ ಮೊದಲು ಯಾವುದೇ ವೈದ್ಯಕೀಯ ಪರೀಕ್ಷೆ ತೆಗೆದುಕೊಳ್ಳುವ ಅಗತ್ಯವಿಲ್ಲ. ವಿಮೆ ಖರೀದಿಯು ಕೇವಲ 2  ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಜತೆಗೆ ಫೋನ್ ಪೇ ಯಲ್ಲಿ ಗ್ರಾಹಕರಿಗೆ ವಿಮೆ ದಾಖಲೆಯನ್ನು ತಕ್ಷಣವೇ ನೀಡಲಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...." ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾ ನೇರಾ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಧರ್ಮಸ್ಥಳ ಪ್ರಕರಣ: ಹೊಸ ದೂರು ದಾಖಲು, ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ!

ಮಂಗಳೂರು: KSRTC ಬಸ್ ಬ್ರೇಕ್ ಫೇಲ್; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು; Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ

SCROLL FOR NEXT