ವಾಣಿಜ್ಯ

ಫೆಬ್ರವರಿಯಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇ.3.6 ರಷ್ಟು ಇಳಿಕೆ!

Shilpa D

ನವದೆಹಲಿ: ಫೆಬ್ರವರಿಯಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇ.3.6 ರಷ್ಟು ಇಳಿಕೆಯಾಗಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ದತ್ತಾಂಶದ ಪ್ರಕಾರ, ತಯಾರಿಕಾ ವಲಯದ ಉತ್ಪಾದನೆಯು ಫೆಬ್ರವರಿ 2021 ರಲ್ಲಿ ಶೇಕಡಾ 3.7 ರಷ್ಟು ಕುಸಿದಿದೆ ಎಂದು ತಿಳಿದು ಬಂದಿದೆ.

ಗಣಿಗಾರಿಕೆ ಉತ್ಪಾದನೆಯು ಶೇಕಡಾ 5.5 ರಷ್ಟು ಕುಸಿದಿದ್ದರೆ, ಫೆಬ್ರವರಿಯಲ್ಲಿ ವಿದ್ಯುತ್ ಉತ್ಪಾದನೆಯು ಶೇಕಡಾ 0.1 ರಷ್ಟು ಏರಿಕೆಯಾಗಿದೆ.

ಫೆಬ್ರವರಿ 2020 ರಲ್ಲಿ ಐಐಪಿ ಶೇಕಡಾ 5.2 ರಷ್ಟು ಏರಿಕೆಯಾಗಿದೆ. 2019-20ರ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿನ ಐಐಪಿ ಬೆಳವಣಿಗೆಗೆ ಹೋಲಿಸಿದರೇ ಶೇಕಡಾ 11.3 ರಷ್ಟು ಸಂಕುಚಿತಗೊಂಡಿದೆ. ಕಳೆದ ವರ್ಷ ಮಾರ್ಚ್‌ನಿಂದ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕೈಗಾರಿಕಾ ಉತ್ಪಾದನೆಯು ಶೇಕಡಾ 18.7 ರಷ್ಟು ಕುಸಿದಿದೆ.

SCROLL FOR NEXT